ಫ್ರಾನ್ಸ್ ನ ಮಾರ್ಸೈಲ್‍ನಲ್ಲಿ ಭಾರತದ ರಾಯಭಾರ ಕಚೇರಿ ಉದ್ಘಾಟನೆ
Update: 2025-02-12 22:27 IST
Photo Credit | X/@FranceinIndia
ಪ್ಯಾರಿಸ್: ಫ್ರಾನ್ಸ್ ನ ಮಾರ್ಸೈಲ್ ನಗರದಲ್ಲಿ ಭಾರತದ ಕಾನ್ಸುಲೇಟ್ ಕಚೇರಿಯನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ಜಂಟಿಯಾಗಿ ಉದ್ಘಾಟಿಸಿದರು.
ಇದಕ್ಕೂ ಮೊದಲು ಉಭಯ ನಾಯಕರು ಮಾರ್ಸೈಲ್‍ನ ಮಜರ್ಗಸ್ ನಲ್ಲಿರುವ, ವಿಶ್ವಯುದ್ಧದಲ್ಲಿ ಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪಾಂಜಲಿ ಸಲ್ಲಿಸಿದರು. ರಾಯಭಾರ ಕಚೇರಿಯ ಉದ್ಘಾಟನೆಯ ಬಳಿಯ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮಾಕ್ರೋನ್ ಭಾರತೀಯ ಸಮುದಾಯದವರನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಬುಧವಾರ ಮಾರ್ಸೈಲ್ ನ ಕ್ಯಾಡಾರಾಚೆಯಲ್ಲಿರುವ ಇಂಟರ್‍ನ್ಯಾಷನಲ್ ಥರ್ಮೋನ್ಯೂಕ್ಲಿಯರ್ ಎಕ್ಸ್ ಪರಿಮೆಂಟಲ್ ರಿಯಾಕ್ಟರ್(ಐಟಿಇಆರ್)ಗೆ ಉಭಯ ನಾಯಕರು ಭೇಟಿ ನೀಡಿ ಸಂಸ್ಥೆಯ ಕಾರ್ಯವನ್ನು ವೀಕ್ಷಿಸಿದರು. ಇದು ವಿಶ್ವದ ಅತೀ ದೊಡ್ಡ ಮತ್ತು ದುಬಾರಿ ಪ್ರಯೋಗ ಎಂದು ವಿವರಿಸಲಾಗಿದೆ.