×
Ad

‘ಭಾರತದ ಬಳಿ ಸಾಕಷ್ಟು ಹಣವಿದೆ’: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Update: 2025-02-19 07:00 IST

PC: facebook.com/DonaldTrump

ವಾಶಿಂಗ್ಟನ್ : “ನಾವೇಕೆ ಭಾರತಕ್ಕೆ 21 ಮಿಲಿಯನ್ ಡಾಲರ್‌ ಗಳನ್ನು ನೀಡಬೇಕು? ಅವರ ಬಳಿ ಹೆಚ್ಚಿನ ಹಣವಿದೆ”, ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮಾರ್-ಎ-ಲಾಗೊದಲ್ಲಿ ಬುಧವಾರ ಕಾರ್ಯಾದೇಶಗಳಿಗೆ ಸಹಿ ಹಾಕುವಾಗ ಟ್ರಂಪ್ ಹೇಳಿರುವುದಾಗಿ ANI ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. "ನಾವೇಕೆ ಭಾರತಕ್ಕೆ 21 ಮಿಲಿಯನ್ ಡಾಲರ್‌ ಗಳನ್ನು ನೀಡಬೇಕು? ಅವರ ಬಳಿ ಹೆಚ್ಚಿನ ಹಣವಿದೆ. ನಮ್ಮ ವಿಚಾರದಲ್ಲಿ ಅವರು ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದ್ದಾರೆ. ಭಾರತದ ತೆರಿಗೆಗಳು ತುಂಬಾ ಹೆಚ್ಚಿರುವುದರಿಂದ ನಾವು ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಭಾರತ ಮತ್ತು ಅವರ ಪ್ರಧಾನಿಯ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ ಮತದಾನಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ನೀಡಬೇಕೇ?", ಎಂದು ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಮತದಾನಕ್ಕಾಗಿ ಗೊತ್ತುಪಡಿಸಿದ 21 ಮಿಲಿಯನ್ ಡಾಲರ್ ನಿಧಿಯನ್ನು ರದ್ದುಗೊಳಿಸುವ ಸರ್ಕಾರಿ ದಕ್ಷತೆ ಇಲಾಖೆ (DOGE) ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಬೆಳೆಯುತ್ತಿರುವ ಆರ್ಥಿಕತೆ ಮತ್ತು ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಭಾರತಕ್ಕೆ ಅಂತಹ ಆರ್ಥಿಕ ಬೆಂಬಲದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 16 ರಂದು, ಎಲೋನ್ ಮಸ್ಕ್ ನೇತೃತ್ವದ DOGE “ಭಾರತದಲ್ಲಿ ಮತದಾರರ ಮತದಾನ”ಕ್ಕಾಗಿ ಉದ್ದೇಶಿಸಲಾದ 22 ಮಿಲಿಯನ್ ಡಾಲರ್ ನಿಧಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಈ ಕ್ರಮವು ಭಾರತದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News