ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ : ಜಾಗತಿಕ ಮಟ್ಟದಲ್ಲಿ ಸಂಭ್ರಮ

Update: 2026-08-15 21:57 IST

ಸಾಂದರ್ಭಿಕ ಚಿತ್ರ

ಲಂಡನ್, ಆ.15: ಫಿಜಿಯಿಂದ ಹಿಡಿದು ಪೂರ್ವ ಏಷ್ಯಾ, ಯುರೋಪ್, ಗಲ್ಫ್ ಹಾಗೂ ಅಮೆರಿಕ ಖಂಡಗಳವರೆಗೆ ಜಗತ್ತಿನಾದ್ಯಂತ ಭಾರತೀಯರು ಮತ್ತು `ಭಾರತದ ಮಿತ್ರರು' ಶನಿವಾರ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಭಾರತೀಯ ರಾಯಭಾರ ಕಚೇರಿಗಳು ಮತ್ತು ಅನಿವಾಸಿ ಭಾರತೀಯ ಸಂಘಟನೆಗಳು ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು `ವಂದೇ ಮಾತರಂ' ಗಾಯನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮುದಾಯ ಸಭೆಗಳನ್ನು ಆಯೋಜಿಸಿದ್ದವು.

ಈ ಜಾಗತಿಕ ಆಚರಣೆಯ ಪ್ರಮುಖ ಆಕರ್ಷಣೆ `ಸೂರ್ಯಪಥ್ ತ್ರಿರಂಗ' ಉಪಕ್ರಮವಾಗಿತ್ತು. `ಹರ್ ಘರ್ ತ್ರಿರಂಗ' ಅಭಿಯಾನದ ಭಾಗವಾದ ಈ ಯೋಜನೆಯಲ್ಲಿ, ಸೂರ್ಯ ಮೂಡುವ ಸಮಯ ವಲಯಗಳ ಪ್ರಕಾರ ಫಿಜಿಯಿಂದ ಪ್ರಾರಂಭವಾಗಿ ಸ್ಯಾನ್ ಫ್ರಾನ್ಸಿಸ್ಕೋವರೆಗೆ ಧ್ವಜಾರೋಹಣವನ್ನು ಸರಣಿ ರೂಪದಲ್ಲಿ ನೆರವೇರಿಸಲಾಯಿತು. ಒಂದೇ ಸೂರ್ಯೋದಯದಿಂದ ಮುಂದಿನ ಸೂರ್ಯೋದಯದವರೆಗೆ ಜಾಗತಿಕ ಆಚರಣೆಯನ್ನು ಒಂದಾಗಿ ಬೆಸೆಯುವುದು ಇದರ ಮುಖ್ಯ ಉದ್ದೇಶವಾಗಿತ್ತು. ಇದೇ ವೇಳೆ ಅಮೆರಿಕ , ಫ್ರಾನ್ಸ್, ರಶ್ಯ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ನಾಯಕರು ಭಾರತಕ್ಕೆ ಶುಭಾಶಯಗಳನ್ನು ಕೋರಿ, ಭಾರತದೊಂದಿಗಿನ ತಮ್ಮ ಬಾಂಧವ್ಯವನ್ನು ಪುನರುಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News