Photo Credit : AP,  PTI 

ಜಕಾರ್ತ: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ರಾಷ್ಟ್ರೀಯ ಉದ್ಯಾನವನವೊಂದರಲ್ಲಿ ಸಂಭವಿಸಿದ ಕಾಡ್ಗಿಚ್ಚನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅರಣ್ಯ ಸಚಿವಾಲಯ ತಿಳಿಸಿದೆ.

ಪೂರ್ವ ಜಾವಾದ ಬ್ರೋಮೋ ತೆಂಗರ್ ಸೆಮೆರು ರಾಷ್ಟ್ರೀಯ ಉದ್ಯಾನವನದಲ್ಲಿ ಗುರುವಾರದಂದು ಸಂತ್ರಸ್ತರು ಕಾಡ್ಗಿಚ್ಚಿನ ಜ್ವಾಲೆಗೆ ಸಿಲುಕಿದರು ಎಂದು ಸಚಿವಾಲಯ ಶುಕ್ರವಾರ ತಿಳಿಸಿದೆ. ಇತರ ಇಬ್ಬರು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕಾಡ್ಗಿಚ್ಚು ಇಂಡೋನೇಷ್ಯಾದ ಗಡಿಗಳನ್ನು ದಾಟಿ ವ್ಯಾಪಿಸಿದ್ದು, ನೆರೆಯ ದೇಶಗಳಲ್ಲಿ ದಟ್ಟವಾದ ಹೊಗೆ ಮತ್ತು ಮಂಜು ಆವರಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಅರಣ್ಯ ಸಚಿವಾಲಯವು ಮೃತರ ಗುರುತನ್ನು ಬಹಿರಂಗಪಡಿಸಿಲ್ಲ. ಸಿಂಗಾಪುರ ಮತ್ತು ಮಲೇಷ್ಯಾಕ್ಕೆ ಹತ್ತಿರವಿರುವ ಸುಮಾತ್ರಾ ಮತ್ತು ಬೋರ್ನಿಯೋ ದ್ವೀಪಗಳು ಕಾಡ್ಗಿಚ್ಚಿನಿಂದ ಅತ್ಯಂತ ತೀವ್ರವಾಗಿ ಪೀಡಿತವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor