ಝೆಲೆನ್‍ಸ್ಕಿ , ಡೊನಾಲ್ಡ್ ಟ್ರಂಪ್ | Photo Credit : AP , PTI

ವಾಶಿಂಗ್ಟನ್: ಅಮೆರಿಕದೊಂದಿಗೆ ವ್ಯವಹರಿಸಲು ಝೆಲೆನ್‍ಸ್ಕಿ ಸೂಕ್ತ ವ್ಯಕ್ತಿಯಲ್ಲ. ರಶ್ಯ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಅವರು ಸಿದ್ಧರಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

ಶಾಂತಿಯ ಬಗ್ಗೆ ಉಕ್ರೇನಿಯನ್ ಅಧ್ಯಕ್ಷರ ಒಲವು ಪ್ರಶ್ನಾರ್ಹವಾಗಿದೆ. ಅವರು ಬಿಕ್ಕಟ್ಟನ್ನು ಇತ್ಯರ್ಥಪಡಿಸಲು ಬಯಸುವುದಾಗಿ ಹೇಳುತ್ತಾರೆ, ಆದರೆ ಹಾಗೆ ಮಾಡುವುದಿಲ್ಲ. ನನಗೆ ಝೆಲೆನ್‍ಸ್ಕಿ ಅಷ್ಟು ಇಷ್ಟವಿಲ್ಲ. ಅವರು ಆ ದೇಶವನ್ನು ನಾಶಪಡಿಸಿದ್ದಾರೆ. ಪುಟಿನ್‍ಗಿಂತ ಝೆಲೆನ್‍ಸ್ಕಿ ಅವರೊಂದಿಗೆ ವ್ಯವಹರಿಸುವುದು ಹೆಚ್ಚು ಕಷ್ಟ ಎಂದು ನಾನು ಭಾವಿಸುತ್ತೇನೆ' ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, 2014ರಲ್ಲಿ ರಶ್ಯವು ಕ್ರಿಮಿಯಾವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಳಗೊಂಡಂತೆ ಯುದ್ಧದ ನಿರ್ವಹಣೆಯ ವಿಚಾರದಲ್ಲಿ ಒಬಾಮಾ ಮತ್ತು ಬೈಡನ್ ಆಡಳಿತವನ್ನು ಟೀಕಿಸಿದರು.

ಉಕ್ರೇನ್ ಪುನಃ ರಶ್ಯದ ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆಸಿರುವುದನ್ನು `ನಾಚಿಕೆಗೇಡಿನ ಸಂಗತಿ' ಎಂದು ಟ್ರಂಪ್ ಬಣ್ಣಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಹೆಚ್ಚಿಸುವುದೇ ಅವರು (ಝೆಲೆನ್‍ಸ್ಕಿ) ಮಾಡುವ ಪ್ರತಿಯೊಂದು ಕೆಲಸದ ಉದ್ದೇಶವಾಗಿದೆ. ಡೀಸೆಲ್ ಇಂಧನವನ್ನು ಉತ್ಪಾದಿಸುವ ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿ ಮಾಡುವ ಮೂಲಕ, ನೀವು ಜಗತ್ತಿಗೆ ಯಾವುದೇ ರೀತಿಯ ಉಪಕಾರ ಮಾಡುತ್ತಿಲ್ಲ' ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor