×
Ad

ಅಮೆರಿಕದೊಂದಿಗಿನ ಒಪ್ಪಂದ ಸನ್ನಿಹಿತವಾಗಿಲ್ಲ: ಇರಾನ್ ಸ್ಪಷ್ಟನೆ

Update: 2026-05-25 19:43 IST

Photo Credit : AP , PTI 

ಟೆಹರಾನ್, ಮೇ 25: ಅಮೆರಿಕದೊಂದಿಗಿನ ಮಾತುಕತೆಯಲ್ಲಿ ಕೆಲವು ಪ್ರಗತಿ ಸಾಧಿಸಲಾಗಿದೆ. ಆದರೆ ಒಪ್ಪಂದವು ಸನ್ನಿಹಿತವಾಗಿಲ್ಲ ಎಂದು ಇರಾನ್ ಹೇಳಿದೆ.

ಸೋಮವಾರ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ ಎಂಬ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿಕೆಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಖೈ `ಚರ್ಚೆಯಲ್ಲಿರುವ ಹೆಚ್ಚಿನ ವಿಷಯಗಳ ಕುರಿತು ನಾವು ತೀರ್ಮಾನಕ್ಕೆ ಬಂದಿದ್ದೇವೆ ಎಂಬ ಹೇಳಿಕೆ ಸರಿಯಾಗಿದೆ. ಆದರೆ ಒಪ್ಪಂದಕ್ಕೆ ಸಹಿ ಹಾಕುವ ಸಮಯ ಸನ್ನಿಹಿತವಾಗಿದೆ ಎಂದು ಇದರರ್ಥವಲ್ಲ. ಯಾರೂ ಈ ರೀತಿ ಪ್ರತಿಪಾದಿಸುವಂತಿಲ್ಲ ಎಂದು ಹೇಳಿದ್ದಾರೆ.

ಗಾಯಗೊಂಡಿರುವ ಇರಾನ್‍ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಅಜ್ಞಾತ ಸ್ಥಳದಲ್ಲಿ ಇರುವುದರಿಂದ ಪ್ರತಿನಿಧಿಗಳೊಂದಿಗೆ ಸಂವಹನ ಕಷ್ಟಕರವಾಗಿದೆ. ಆದ್ದರಿಂದ ಅಮೆರಿಕ ಜೊತೆಗಿನ ಮಾತುಕತೆಯ ವೇಗ ವಿಳಂಬಗೊಂಡಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News