ಇಸ್ರೇಲ್‍ಗಾಗಿ ಗೂಢಚಾರಿಕೆ ನಡೆಸಿದ ಆರೋಪ: ಇಬ್ಬರನ್ನು ಗಲ್ಲಿಗೇರಿಸಿದ ಇರಾನ್
Update: 2026-08-03 21:32 IST
ಟೆಹರಾನ್: ಇಸ್ರೇಲ್‍ಗಾಗಿ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಸೋಮವಾರ ಗಲ್ಲಿಗೇರಿಸಲಾಗಿದೆ ಎಂದು ಇರಾನ್ ನ್ಯಾಯಾಂಗ ಇಲಾಖೆ ತಿಳಿಸಿದೆ.
ಇಸ್ರೇಲ್‍ನ ವಿದೇಶಿ ಗುಪ್ತಚರ ಸಂಸ್ಥೆಯಾದ ಮೊಸಾದ್ ಏಜೆಂಟ್‍ಗಳಿಗೆ ಅತ್ಯಂತ ಸೂಕ್ಷ್ಮ ಮಿಲಿಟರಿ ಮತ್ತು ಭದ್ರತಾ ಸ್ಥಳಗಳ ಮಾಹಿತಿಯನ್ನು ತಲುಪಿಸಿದ ಆರೋಪದ ಮೇಲೆ ಓಮಿದ್ ಬೆಹಜಾದ್ ಮತ್ತು ಪೌರಿಯಾ ಸಫಾವತ್ ಅವರನ್ನು ಇಂದು ಬೆಳಿಗ್ಗೆ ಗಲ್ಲಿಗೇರಿಸಲಾಯಿತು.
ಯುದ್ಧದ ಸಮಯದಲ್ಲಿ ಮಿಲಿಟರಿ ಮತ್ತು ಭದ್ರತಾ ಕೇಂದ್ರಗಳ ಮಾಹಿತಿಯನ್ನು ಒದಗಿಸುವ ಮೂಲಕ ಅವರು ಗುಪ್ತಚರ ಸಂಸ್ಥೆಗಳು ತಮ್ಮ ಉದ್ದೇಶಗಳನ್ನು ಸಾಧಿಸಲು ನೆರವಾದರು ಎಂದು ಇರಾನ್ ನ್ಯಾಯಾಂಗದ ಮಾಧ್ಯಮ ಸಂಸ್ಥೆಯಾದ ʼಮಿಜಾನ್' ಸೋಮವಾರ ತಿಳಿಸಿದೆ.