ಜಗತ್ತಿನ ಕಿರಿಯ ಪುರುಷ ಪ್ರೊಫೆಸರ್: ಅಮೆರಿಕದ ಥಾಮಸ್ ವಿಶ್ವದಾಖಲೆ

Update: 2026-08-03 21:55 IST

Photo Credit: x/@CHANDRASHE13001

ನ್ಯೂಯಾರ್ಕ್: ಫ್ಲೋರಿಡಾದ ಯುವ ಎಂಜಿನಿಯರಿಂಗ್ ಶಿಕ್ಷಕರೊಬ್ಬರು ತಮ್ಮ 19ನೇ ವಯಸ್ಸಿಗೆ ಕಾಲಿಡುವ ಮೊದಲೇ ಕಾಲೇಜೊಂದರಲ್ಲಿ ಬೋಧನಾ ಹುದ್ದೆಯನ್ನು ಸ್ವೀಕರಿಸುವ ಮೂಲಕ ಜಗತ್ತಿನ ಅತ್ಯಂತ ಕಿರಿಯ ಪುರುಷ ಪ್ರೊಫೆಸರ್ ಎಂಬ ವಿಶ್ವ ದಾಖಲೆ ನಿರ್ಮಿಸಿರುವುದಾಗಿ ವರದಿಯಾಗಿದೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ನೇಥನ್ ಥಾಮಸ್ ಎಂಬುವವರು 18 ವರ್ಷ 346 ದಿನಗಳ ವಯಸ್ಸಿನಲ್ಲಿ ಮಯಾಮಿ ಡೇಡ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಬೋಧನಾ ಹುದ್ದೆಯನ್ನು ವಹಿಸಿಕೊಳ್ಳುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಕಾಲಿನ್ ಮೆಕ್ಲಾರಿನ್ ಎಂಬವರು 19ನೇ ವಯಸ್ಸಿನಲ್ಲಿ ಪ್ರೊಫೆಸರ್ ಆಗುವ ಮೂಲಕ ಕಳೆದ 306 ವರ್ಷಗಳಿಂದ ಈ ದಾಖಲೆಗೆ ಪಾತ್ರರಾಗಿದ್ದರು. ಇದರ ಜೊತೆಗೆ, 2008 ರಲ್ಲಿ ತಮ್ಮ 18 ವರ್ಷ 362 ದಿನಗಳ ವಯಸ್ಸಿನಲ್ಲಿ ಪ್ರೊಫೆಸರ್ ಆಗಿ ಜಗತ್ತಿನ ಕಿರಿಯ ಮಹಿಳಾ ಪ್ರೊಫೆಸರ್ ಎಂಬ ದಾಖಲೆ ಹೊಂದಿರುವ ಆಲಿಯಾ ಸಬುರ್ ಅವರಿಗಿಂತ ಥಾಮಸ್ 16 ದಿನ ಕಿರಿಯರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News