ಕ್ಷಿಪಣಿ ಕೊರತೆಯಿಂದ ದಾಳಿ ತಡೆಹಿಡಿದ ಟ್ರಂಪ್: ಇರಾನ್ ತಿರುಗೇಟು

ಹೊಸ ದಾಳಿಗಳನ್ನು ನಡೆಸದಂತೆ ಅಮೆರಿಕಕ್ಕೆ ಇರಾನ್ ಮನವಿ ಮಾಡಿದೆ ಎಂದಿದ್ದ ಅಮೆರಿಕ ಅಧ್ಯಕ್ಷ

Update: 2026-08-02 23:41 IST

ಸಾಂದರ್ಭಿಕ ಚಿತ್ರ (AI)

ಟೆಹರಾನ್: ಹೊಸ ದಾಳಿಗಳನ್ನು ನಡೆಸದಂತೆ ಅಮೆರಿಕಕ್ಕೆ ಇರಾನ್ ಮನವಿ ಮಾಡಿದೆ ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್‍ನ ಮಾಧ್ಯಮಗಳು ರವಿವಾರ ನಿರಾಕರಿಸಿದ್ದು ವಾಯು ರಕ್ಷಣಾ ಕ್ಷಿಪಣಿಗಳ ಕೊರತೆಯ ಟ್ರಂಪ್ ಮತ್ತಷ್ಟು ದಾಳಿಗಳನ್ನು ತಡೆಹಿಡಿಯಲು ಕಾರಣವಾಗಿವೆ ಎಂದು ಪ್ರತಿಪಾದಿಸಿದೆ.

ಟ್ರಂಪ್ ಹೇಳಿಕೆಯು ಒಂದು ಹೊಸ ಸುಳ್ಳಲ್ಲದೆ ಬೇರೇನೂ ಅಲ್ಲ. ಇರಾನ್ ಸಶಸ್ತ್ರ ಪಡೆಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಜ್ಜಾಗಿದ್ದು, ಕಟ್ಟೆಚ್ಚರದಲ್ಲಿವೆ. ಅಮೆರಿಕ ತನ್ನ ವೈರತ್ವದ ಕ್ರಮಗಳನ್ನು ಮುಂದುವರಿಸುವವರೆಗೆ, ಹಾರ್ಮುಝ್ ಜಲಸಂಧಿಯು ಮುಚ್ಚಲ್ಪಟ್ಟಿರುತ್ತದೆ ಎಂದು ಇರಾನ್‍ನ ಉನ್ನತ ಮೂಲವೊಂದನ್ನು ಉಲ್ಲೇಖಿಸಿ ʼಫಾರ್ಸ್' ಸುದ್ದಿಸಂಸ್ಥೆ ವರದಿ ಮಾಡಿದೆ.

ಬೆದರಿಕೆಗಳ ಎದುರು ಟೆಹ್ರಾನ್ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇರಾನ್ ವಿರುದ್ಧದ ಯಾವುದೇ ಸಂಭಾವ್ಯ ದಾಳಿ ಮತ್ತು ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಇರಾನ್‍ನ ಹಂಗಾಮಿ ರಕ್ಷಣಾ ಸಚಿವ ಮಜೀದ್ ಇಬ್ನ್ ಅಲ್-ರೇಜಾ ಎಚ್ಚರಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಟೆಹರಾನ್ ತನ್ನ ರಾಜತಾಂತ್ರಿಕ ಸಂಪರ್ಕವನ್ನು ಚುರುಕುಗೊಳಿಸಿದೆ. ವೇಗವಾಗಿ ಬದಲಾಗುತ್ತಿರುವ ಪ್ರಾದೇಶಿಕ ಭದ್ರತಾ ಪರಿಸ್ಥಿತಿಯ ಕುರಿತು ಚರ್ಚಿಸಲು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಪಾಕಿಸ್ತಾನ, ಟರ್ಕಿ ಮತ್ತು ಸೌದಿ ಅರೇಬಿಯಾದ ಸಚಿವರು ಹಾಗೂ ಹಿರಿಯ ನಾಯಕರೊಂದಿಗೆ ತುರ್ತು ಸಮಾಲೋಚನೆಗಳನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News