ತಿಳುವಳಿಕಾ ಒಪ್ಪಂದವು ಅಮೆರಿಕದ ಸೋಲಿನ ಘೋಷಣೆ : ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು
ಡೊನಾಲ್ಡ್ ಟ್ರಂಪ್ | Photo Credit : PTI
ಟೆಹರಾನ್, ಜೂ.24: ಇರಾನ್ ದೇಶವು ಸಂಕಷ್ಟದಲ್ಲಿದೆ ಮತ್ತು ಪ್ರಮುಖ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಿದ್ಧವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದನೆಗೆ ಪ್ರತಿಕ್ರಿಯಿಸಿರುವ ಇರಾನ್, ತಿಳುವಳಿಕಾ ಒಪ್ಪಂದವು ಅಮೆರಿಕದ ಸೋಲಿನ ಘೋಷಣೆ ಎಂದು ತಿರುಗೇಟು ನೀಡಿದೆ.
` ತಿಳುವಳಿಕಾ ಒಪ್ಪಂದವು ಯಾವುದೇ ಒತ್ತಡ ಮತ್ತು ದಬ್ಬಾಳಿಕೆಯ ಫಲಿತಾಂಶವಲ್ಲ, ಇದು ಧೀರ ಇರಾನ್ ರಾಷ್ಟ್ರದ ಪ್ರತಿರೋಧ ಮತ್ತು ಅಧಿಕಾರದ ಫಲಿತಾಂಶವಾಗಿದೆ. ಅದಕ್ಕಾಗಿಯೇ, ಇಸ್ಲಾಮಾಬಾದ್ ತಿಳುವಳಿಕಾ ಒಪ್ಪಂದವು ಅಮೆರಿಕದ ಸೋಲಿನ ಘೋಷಣೆಯಾಗಿದೆ' ಎಂದು ಇರಾನ್‍ನ ಉನ್ನತ ಮಟ್ಟದ ಸಂಧಾನಕಾರ ಮುಹಮ್ಮದ್ ಬಘೇರ್ ಘಾಲಿಬಾಫ್ ಹೇಳಿದ್ದು ಪಶ್ಚಿಮ ಏಷ್ಯಾದ ಭದ್ರತೆಯನ್ನು ಆಯಾ ಪ್ರದೇಶದ ದೇಶಗಳೇ ಖಚಿತಪಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಯುಎಇ ನಾಯಕ ಮೊಹಮ್ಮದ್ ಬಿನ್ ಜಾಯೆದ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ನಂತರ ಕುವೈತ್ ಮತ್ತು ಬಹ್ರೇನ್‍ಗೆ ತೆರಳಿ ಅಲ್ಲಿ ಗಲ್ಫ್ ಸಹಕಾರ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಸಂದರ್ಭದಲ್ಲೇ ಈ ಹೇಳಿಕೆಗಳು ಹೊರಬಿದ್ದಿವೆ.