Photo Credit : X

ಟೆಹರಾನ್: ಇರಾನ್ ಅಥವಾ ಇರಾನ್ ಬೆಂಬಲಿತ ಗುಂಪುಗಳು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಹಾಗೂ ಇತರ ತಾಣಗಳ ಮೇಲೆ ನಡೆಸಿದ 115ಕ್ಕೂ ಹೆಚ್ಚು ದಾಳಿಗಳಿಂದ 26 ತಾಣಗಳಿಗೆ ಹಾನಿಯಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (AP) ಸುದ್ದಿ ಸಂಸ್ಥೆಯ ವಿಶ್ಲೇಷಣೆ ತಿಳಿಸಿದೆ.

ಅ. 31ರಂದು ಪ್ರಕಟವಾದ ವಿಶ್ಲೇಷಣೆಯ ಪ್ರಕಾರ, ಆಗಸ್ಟ್‌ ವರೆಗೆ ನಡೆದ ದಾಳಿಗಳಲ್ಲಿ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಅಮೆರಿಕದ ಆಸ್ತಿಗಳಿರುವ ಇತರ ತಾಣಗಳು ಹಾನಿಗೊಳಗಾಗಿವೆ. ಉಪಗ್ರಹ ಚಿತ್ರಗಳ ವಿಶ್ಲೇಷಣೆಯ ಪ್ರಕಾರ, ಇರಾನ್ ಮೊದಲು ಅಮೆರಿಕದ ನೆಲೆಗಳಲ್ಲಿರುವ ರಡಾರ್ ಮತ್ತು ದಾಳಿ ಪತ್ತೆ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ. ಬಳಿಕ ವಿಮಾನಗಳು ಮತ್ತು ಕಟ್ಟಡಗಳ ಮೇಲೆ ದಾಳಿ ನಡೆಸಿದೆ.

ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭಿಸಿದ ಬಳಿಕ ಕುವೈತ್‌ ನ ಅಲಿ ಅಲ್-ಸಲೇಮ್ ವಾಯುನೆಲೆಯ ಮೇಲೆ ಕನಿಷ್ಠ 30 ಬಾರಿ ದಾಳಿ ನಡೆದಿದೆ. ಈ ದಾಳಿಗಳಿಂದ ಕನಿಷ್ಠ 15 ವಿಮಾನ ಹ್ಯಾಂಗರ್‌ ಗಳು, ಹಲವು ಗೋದಾಮುಗಳು ಹಾಗೂ ವಸತಿ ಪ್ರದೇಶದ ಸಮೀಪವಿದ್ದ 10 ಕಟ್ಟಡಗಳು ಹಾನಿಗೀಡಾಗಿವೆ ಅಥವಾ ನಾಶವಾಗಿವೆ ಎಂದು ವಿಶ್ಲೇಷಣೆ ತಿಳಿಸಿದೆ.

ಇರಾನ್ ನಡೆಸಿದ ದಾಳಿಗಳಿಂದ ಅಮೆರಿಕದ ಉಪಕರಣಗಳಿಗೆ ಶತಕೋಟಿ ಡಾಲರ್ ಮೌಲ್ಯದ ಹಾನಿಯಾಗಿದೆ ಎಂದು ಎಪಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.