×
Ad

ಅಯತೊಲ್ಲಾ ಅಲಿ ಖಾಮಿನೈ ಹತ್ಯೆಗೆ ಬಯಸಿದ್ದೆವು : ಇಸ್ರೇಲ್ ಕಾಟ್ಝ್

Update: 2025-06-27 10:36 IST

Photo | indiatoday

ಜೆರುಸಲೇಮ್ : ಇಸ್ರೇಲ್ ಸೇನೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ ಅವರನ್ನು ಹತ್ಯೆ ಮಾಡಲು ಬಯಸಿತ್ತು, ಆದರೆ ಸರಿಯಾದ ಅವಕಾಶ ಸಿಕ್ಕಿರಲಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಹೇಳಿದ್ದಾರೆ.

ಇಸ್ರೇಲ್‌ನ ಚಾನೆಲ್ 12, ಚಾನೆಲ್ 13 ಮತ್ತು ಸರಕಾರಿ ಸ್ವಾಮ್ಯದ ಕಾನ್ ಜೊತೆ ಪ್ರೈಮ್‌ಟೈಮ್‌ ಸಂದರ್ಶನದಲ್ಲಿ ಮಾತನಾಡಿದ ಇಸ್ರೇಲ್ ಕಾಟ್ಝ್, ಇಸ್ರೇಲ್‌ನ ಯುದ್ಧ ತಂತ್ರದ ಬಗ್ಗೆ ಹೊಸ ವಿವರಗಳನ್ನು ಬಹಿರಂಗಪಡಿಸಿದರು. ಖಾಮಿನೈ ಬೆದರಿಕೆಯ ಹಿನ್ನೆಲೆ ಭೂಗತರಾದರು, ಹೊಸ ಉನ್ನತ ಕಮಾಂಡರ್‌ಗಳೊಂದಿಗಿನ ಸಂಪರ್ಕವನ್ನು ಕಡಿದುಕೊಂಡಿದ್ದರು ಎಂದು ಹೇಳಿದರು.

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಜೂನ್ 13ರಂದು ಇರಾನಿನ ಪರಮಾಣು ತಾಣಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವಾರು ಹಿರಿಯ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳು ಮೃತಪಟ್ಟ ನಂತರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದರು.

ಸಂಘರ್ಷದ ಆರಂಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರೂ ಖಾಮಿನೈ ನೇರ ಗುರಿಯಾಗಬಹುದು ಎಂದು ಸುಳಿವು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News