×
Ad

ಬೈರೂತ್ ಮೇಲೆ ಇಸ್ರೇಲ್‍ ನಿಂದ ತೀವ್ರ ಬಾಂಬ್ ದಾಳಿ : ವರದಿ

Update: 2024-11-26 22:48 IST

ಸಾಂದರ್ಭಿಕ ಚಿತ್ರ | PC : aljazeera.com

ಬೈರೂತ್ : ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಒಪ್ಪಂದದ ಬಗ್ಗೆ ಘೋಷಣೆ ಹೊರಬೀಳುವ ನಿರೀಕ್ಷೆಯ ನಡುವೆಯೇ ಮಂಗಳವಾರ ಲೆಬನಾನ್ ರಾಜಧಾನಿ ಬೈರೂತ್ ಹಾಗೂ ನೆರೆಯ ಪ್ರದೇಶದ ಮೇಲೆ ಇಸ್ರೇಲ್ ತೀವ್ರ ಬಾಂಬ್ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಬೈರೂತ್‍ನ ನೌಯೆರಿ ಜಿಲ್ಲೆಯಲ್ಲಿ ಸ್ಥಳಾಂತರಕ್ಕೆ ಸೂಚನೆ ನೀಡದೆಯೇ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಸುಮಾರು 30 ನಿಮಿಷದ ಬಳಿಕ ಬೈರೂತ್‍ನ ದಕ್ಷಿಣದ ಉಪನಗರಗಳ ಮೇಲೆ ಕನಿಷ್ಠ 10 ಬಾಂಬ್ ದಾಳಿ ನಡೆಸಿದೆ ಎಂದು ಲೆಬನಾನ್‌ ನ ಆರೋಗ್ಯ ಇಲಾಖೆ ಹೇಳಿದೆ.

ಈ ಪ್ರದೇಶದಾದ್ಯಂತ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ವ್ಯಾಪಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಅವಿಚಯ್ ಅಡ್ರೇಯ್ ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News