×
Ad

ಲೆಬನಾನ್‍ ನಿಂದ ಹಿಂದೆ ಸರಿಯಲು ಮಿಲಿಟರಿ ಸಿದ್ಧ : ಇಸ್ರೇಲ್ ಹೇಳಿಕೆ

Update: 2025-02-14 22:45 IST

PC : NDTV

ಟೆಲ್‍ಅವೀವ್ : ಅಮೆರಿಕ-ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಲಾದ ಕದನ ವಿರಾಮ ಒಪ್ಪಂದದ ಪ್ರಕಾರ ನಿಗದಿತ ಗಡುವಿನೊಳಗೆ ಲೆಬನಾನ್ ಪ್ರದೇಶದಿಂದ ಹಿಂದಕ್ಕೆ ಸರಿಯಲು ಇಸ್ರೇಲ್ ಮಿಲಿಟರಿ ಸಿದ್ಧತೆ ನಡೆಸುತ್ತಿದೆ ಎಂದು ಇಸ್ರೇಲ್‍ ನ ಉನ್ನತ ಭದ್ರತಾ ಅಧಿಕಾರಿ ಶುಕ್ರವಾರ ಹೇಳಿದ್ದಾರೆ.

ನವೆಂಬರ್ 27ರಿಂದ ಜಾರಿಗೆ ಬಂದಿರುವ ಕದನ ವಿರಾಮದಡಿ, ಮುಂದಿನ 60 ದಿನಗಳೊಳಗೆ ಇಸ್ರೇಲ್ ಸೇನೆ ಲೆಬನಾನ್‍ನಿಂದ ಹಿಂದಕ್ಕೆ ಸರಿಯಬೇಕು(ಬಳಿಕ ಈ ಗಡುವನ್ನು ಫೆಬ್ರವರಿ 18ಕ್ಕೆ ವಿಸ್ತರಿಸಲಾಗಿದೆ) ಮತ್ತು ದಕ್ಷಿಣ ಲೆಬನಾನ್‍ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ಜತೆಗೆ ಲೆಬನಾನ್‍ನ ಸೇನೆಯನ್ನು ನಿಯೋಜಿಸಬೇಕು. ಈ ಗಡುವಿನ ಒಳಗೆ ದಕ್ಷಿಣ ಲೆಬನಾನ್‍ನಲ್ಲಿ ಇಸ್ರೇಲಿ ಗಡಿಭಾಗದ ಬಳಿಯಿರುವ ತನ್ನ ನೆಲೆಗಳನ್ನು ಹಮಾಸ್ ಕೂಡಾ ತೆರವುಗೊಳಿಸಬೇಕಿದೆ.

ಅಮೆರಿಕ ಮೇಲ್ವಿಚಾರಣೆ ಮಾಡುವ ಒಪ್ಪಂದಕ್ಕೆ ಅನುಗುಣವಾಗಿ ಇನ್ನೂ ನಮ್ಮ ಸೇನೆಯನ್ನು ನಿಯೋಜಿಸಿದ್ದೇವೆ ಮತ್ತು ನಿಗದಿತ ಗಡುವಿನ ಒಳಗೆ ಲೆಬನಾನ್ ಸೇನೆಗೆ ಜವಾಬ್ದಾರಿ ಹಸ್ತಾಂತರವನ್ನು ಖಾತರಿಗೊಳಿಸಲು ಅಮೆರಿಕದ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಇಸ್ರೇಲ್‍ನ ಭದ್ರತಾ ಅಧಿಕಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News