×
Ad

ಫಿಲಾಡೆಲ್ಫಿ ಕಾರಿಡಾರ್‍ನಿಂದ ಹಿಂದೆ ಸರಿಯಲು ಇಸ್ರೇಲ್ ನಿರಾಕರಣೆ

Update: 2025-02-27 21:05 IST

PC : NDTV

ಟೆಲ್‍ಅವೀವ್: ಕಾರ್ಯತಂತ್ರದ ಫಿಲಾಡೆಲ್ಫಿ ಕಾರಿಡಾರ್‍ನಿಂದ ಇಸ್ರೇಲ್ ಪಡೆಗಳು ಹಿಂದಕ್ಕೆ ಸರಿಯುವುದಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಗುರುವಾರ ವರದಿ ಮಾಡಿದೆ.

ಈ ಪ್ರದೇಶವು ಈಜಿಪ್ಟ್‍ನೊಂದಿಗಿನ ಗಾಝಾದ ಗಡಿಯಲ್ಲಿರುವ ಒಂದು ಕಾರ್ಯತಂತ್ರದ ಭೂಮಿಯಾಗಿದ್ದು ಹಮಾಸ್ ಜತೆಗಿನ ಕದನ ವಿರಾಮ ಒಪ್ಪಂದದ ಪ್ರಥಮ ಹಂತದಲ್ಲಿ ಮಾರ್ಚ್ 1ರಿಂದ ಇಲ್ಲಿಂದ ಇಸ್ರೇಲ್ ಪಡೆಗಳ ವಾಪಸಾತಿ ಆರಂಭಗೊಂಡು 8 ದಿನದೊಳಗೆ ಪೂರ್ಣಗೊಳ್ಳಬೇಕಿದೆ. ಇದೀಗ ಇಸ್ರೇಲ್ ನಿರಾಕರಿಸುತ್ತಿರುವುದರಿಂದ ಕದನ ವಿರಾಮ ಮಾತುಕತೆಯ ಮುಂದಿನ ಹಂತದ ಬಗ್ಗೆ ಅನಿಶ್ಚಿತತೆ ಮೂಡಿದೆ.

`ಹಮಾಸ್ ಸಶಸ್ತ್ರ ಹೋರಾಟಗಾರರು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವುದನ್ನು ತಡೆಯಲು ಗಾಝಾದ ಬದಿಯಲ್ಲಿ ತನ್ನ ಉಪಸ್ಥಿತಿಯನ್ನು ಮುಂದುವರಿಸುವುದು ಅಗತ್ಯವಾಗಿದೆ ' ಎಂದು ಇಸ್ರೇಲ್ ಪ್ರತಿಪಾದಿಸಿದೆ. ಮಾತುಕತೆ ಮತ್ತು ಕದನ ವಿರಾಮ ಒಪ್ಪಂದದ ಅನುಸರಣೆಯ ಮೂಲಕವಷ್ಟೇ ಇಸ್ರೇಲ್ ಒತ್ತೆಯಾಳುಗಳನ್ನು ಹಿಂಪಡೆಯಲು ಸಾಧ್ಯ ಎಂದು ಹಮಾಸ್ ಗುರುವಾರ ಪ್ರತಿಕ್ರಿಯಿಸಿದೆ. ಫಿಲಾಡೆಲ್ಫಿ ಕಾರಿಡಾರ್‍ನಿಂದ ಇಸ್ರೇಲ್ ತನ್ನ ಪಡೆಗಳನ್ನು ಹಿಂಪಡೆಯಬೇಕು ಎಂದು ಈಜಿಪ್ಟ್ ಕೂಡಾ ಆಗ್ರಹಿಸುತ್ತಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಫಿಲಾಡೆಲ್ಫಿ ಕಾರಿಡಾರ್‍ನ ಗಾಝಾ ಬದಿಯ ನಿಯಂತ್ರಣವನ್ನು ಹಮಾಸ್‍ನಿಂದ ಇಸ್ರೇಲ್ ವಶಕ್ಕೆ ಪಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News