×
Ad

ಸಿರಿಯಾ ಅಧ್ಯಕ್ಷರ ನಿವಾಸದ ಬಳಿ ಇಸ್ರೇಲ್ ವೈಮಾನಿಕ ದಾಳಿ

Update: 2025-05-02 21:40 IST

ಬೆಂಜಮಿನ್ ನೆತನ್ಯಾಹು | PC : PTI 

ಡಮಾಸ್ಕಸ್: ಸಿರಿಯಾ ರಾಜಧಾನಿ ಡಮಾಸ್ಕಸ್‍ನಲ್ಲಿ ಅಧ್ಯಕ್ಷರ ಅರಮನೆಯ ಬಳಿಯ ಗುರಿಯ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಾಗಿ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇದು ಸಿರಿಯಾ ಆಡಳಿತಕ್ಕೆ ಸ್ಪಷ್ಟ ಸಂದೇಶವಾಗಿದೆ. ಡಮಾಸ್ಕಸ್‍ನ ದಕ್ಷಿಣಕ್ಕೆ ಪಡೆಯನ್ನು ನಿಯೋಜಿಸಲು ಅಥವಾ ಡ್ರೂಝ್ ಸಮುದಾಯಕ್ಕೆ ಯಾವುದೇ ಬೆದರಿಕೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ನೆತಹ್ಯಾಹು ಹಾಗೂ ರಕ್ಷಣಾ ಸಚಿವ ಇಸ್ರೇಲ್ ಕಟ್ಝ್ ನೀಡಿದ ಜಂಟಿ ಹೇಳಿಕೆ ತಿಳಿಸಿದೆ.

ಅಲ್ಪಸಂಖ್ಯಾತ ಡ್ರೂಝ್ ಸಮುದಾಯಕ್ಕೆ ಹಾನಿಯಾಗುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಿರಿಯಾ ಆಡಳಿತಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಇಸ್ರೇಲ್ ಹೇಳಿಕೆ ನೀಡಿದ ಬಳಿಕ ನಿರಂತರ ಎರಡನೇ ದಿನವೂ ಡಮಾಸ್ಕಸ್ ಹಾಗೂ ಹೊರವಲಯದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News