ಜಪಾನ್ | ಆಡಳಿತಾರೂಢ ಪಕ್ಷದ ನಾಯಕಿಯಾಗಿ ಸನೇ ಟಕೈಚಿ ಆಯ್ಕೆ
Update: 2025-10-04 23:22 IST
Photo | AFP
ಟೋಕಿಯೊ, ಅ.4: ಜಪಾನಿನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ(ಎಲ್‍ಡಿಪಿ)ಯ ನಾಯಕಿಯಾಗಿ ಆಂತರಿಕ ವ್ಯವಹಾರಗಳ ಇಲಾಖೆಯ ಮಾಜಿ ಸಚಿವೆ ಸನೇ ಟಕೈಚಿ ಶನಿವಾರ ಆಯ್ಕೆಗೊಳ್ಳುವ ಮೂಲಕ ಜಪಾನಿನ ಪ್ರಪ್ರಥಮ ಮಹಿಳಾ ಪ್ರಧಾನಿ ಎಂಬ ದಾಖಲೆಗೆ ಸನಿಹಗೊಂಡಿದ್ದಾರೆ.
ಪದತ್ಯಾಗದ ಘೋಷಣೆ ಮಾಡಿರುವ ಪ್ರಧಾನಿ ಶಿಗೆರು ಇಷಿಬಾರ ಸ್ಥಾನದಲ್ಲಿ ಟಕೈಚಿ ನೇಮಕಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಆದರೆ ಎಲ್‍ಡಿಪಿ ಸಂಸತ್ತಿನಲ್ಲಿ ಅತೀ ದೊಡ್ಡ ಪಕ್ಷವಾಗಿದ್ದರೂ ಸ್ಪಷ್ಟ ಬಹುಮತ ಹೊಂದಿಲ್ಲದ ಕಾರಣ ಮಿತ್ರಪಕ್ಷಗಳ ಬೆಂಬಲವನ್ನು ಅವಲಂಬಿಸಿದೆ. ಪ್ರಧಾನಿ ಹುದ್ದೆಗೆ ಎಲ್‍ಡಿಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಟಕೈಚಿ ತಮ್ಮ ನಿಕಟ ಎದುರಾಳಿ ಕೊಯ್ಜುಮಿ ವಿರುದ್ಧ ಗೆಲುವು ಸಾಧಿಸಿರುವುದಾಗಿ ವರದಿಯಾಗಿದೆ.