ಜಪಾನ್ ನ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿ ಸನೈ ತಕೈಚಿ ಆಯ್ಕೆ
Update: 2025-10-21 13:00 IST
ಸನೈ ತಕೈಚಿ (Photo credit: X/@takaichi_sanae)
ಟೋಕಿಯೊ: ಕಟ್ಟಾ ಸಂಪ್ರದಾಯವಾದಿ ಸನೈ ತಕೈಚಿ ಜಪಾನ್ ನ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ.
ಸ್ಪಷ್ಟ ಬಹುಮತ ಪಡೆಯದೆ ಅತಂತ್ರ ಸ್ಥಿತಿ ಎದುರಿಸುತ್ತಿದ್ದ ಸನೈ ತಕೈಚಿ ನೇತೃತ್ವದ ಪಕ್ಷವು ಹೊಸ ಮೈತ್ರಿ ಪಕ್ಷದೊಂದಿಗೆ ಮೈತ್ರಿ ಏರ್ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಒಂದು ದಿನದ ಬಳಿಕ ಅವರು ಜಪಾನ್ ನ ಪ್ರಧಾನಿ ಹುದ್ದೆಗೇರಿದ್ದಾರೆ.
ಜುಲೈ ತಿಂಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಹೀನಾಯ ಪರಾಭವ ಅನುಭವಿಸಿದ ನಂತರ, ಶಿಗೆರು ಇಶಿಬಾ ಬದಲಿಗೆ ಸನೈ ತಕೈಚಿ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ, ಕೇವಲ ಒಂದು ವರ್ಷ ಪ್ರಧಾನಿಯಾಗಿದ್ದ ಇಶಿಬಾ, ತಮ್ಮ ಇಡೀ ಸಚಿವ ಸಂಪುಟದೊಂದಿಗೆ ರಾಜೀನಾಮೆ ಸಲ್ಲಿಸಿ, ನೂತನ ಉತ್ತರಾಧಿಕಾರಿಯ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದರು.