ದಕ್ಷಿಣ ಚೀನಾ ಸಮುದ್ರದಲ್ಲಿ ಆಗ್ನೇಯ ಏಶ್ಯಾ ರಾಷ್ಟ್ರಗಳ ಜಂಟಿ ಸಮರಾಭ್ಯಾಸ
Update: 2023-09-19 23:41 IST
ಆಸಿಯಾನ್ ಸಾಲಿಡಾರಿಟಿ ಎಕ್ಸರ್ಸೈಸ್ | Photo: PTI
ಜಕಾರ್ತ: ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಇದೇ ಮೊದಲ ಬಾರಿಗೆ ಆಗ್ನೇಯ ಏಶ್ಯಾ ರಾಷ್ಟ್ರಗಳ ಸಂಘವು ಜಂಟಿ ನೌಕಾಪಡೆ ಸಮರಾಭ್ಯಾಸಕ್ಕೆ ಮಂಗಳವಾರ ಚಾಲನೆ ನೀಡಿದೆ ಎಂದು ವರದಿಯಾಗಿದೆ.
‘ಆಸಿಯಾನ್ ಸಾಲಿಡಾರಿಟಿ ಎಕ್ಸರ್ಸೈಸ್’ ಎಂದು ಕರೆಯಲಾಗುವ ಈ ಕಸರತ್ತು ಜಂಟಿ ಕಡಲಗಸ್ತು ಕಾರ್ಯಾಚರಣೆ, ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ, ಮಾನವೀಯ ಮತ್ತು ವಿಪತ್ತು ಪರಿಹಾರಗಳನ್ನು ಒಳಗೊಂಡಿದೆ. ಇಂಡೊನೇಶ್ಯಾದ ನಟುನಾ ಜಲಪ್ರದೇಶದಲ್ಲಿ ನಡೆಯುವ ಐದು ದಿನಗಳ ಸಮರಾಭ್ಯಾಸ ಆಸಿಯಾನ್ ದೇಶಗಳ ನಡುವೆ ಮಿಲಿಟರಿ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಮಾನವೀಯ ಪರಿಹಾರ ಮತ್ತು ವಿಪತ್ತು ತಡೆಗಟ್ಟುವಲ್ಲಿ ತೊಡಗಿರುವ ನಾಗರಿಕ ಗುಂಪುಗಳು ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿವೆ ಎಂದು ಇಂಡೋನೇಶ್ಯಾದ ಮಿಲಿಟರಿ ಮುಖ್ಯಸ್ಥ ಅಡ್ಮಿರಲ್ ಯೂಡೊ ಮರ್ಗೋನೊ ಹೇಳಿದ್ದಾರೆ.