×
Ad

ಕೆನಡಾದಲ್ಲಿ ಭಾರತೀಯನ ಹತ್ಯೆ; ಶಂಕಿತ ವಶಕ್ಕೆ

Update: 2026-06-10 22:22 IST

Photo Credit : NDTV 

ಒಂಟಾರಿಯೊ, ಜೂ.10: ಕೆನಡಾದ ಒಂಟಾರಿಯೊ ಪ್ರಾಂತೀಯ ಪೊಲೀಸ್ ಇಲಾಖೆಯ ಅಧಿಕಾರಿ, ಭಾರತೀಯ ಮೂಲದ ತರುಣ್ ಬಾಲಿ ಕರ್ತವ್ಯ ನಿರ್ವಹಣೆಯ ಸಂದರ್ಭ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿ ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವುದಾಗಿ ಸಿಟಿವಿ ನ್ಯೂಸ್ ಬುಧವಾರ ವರದಿ ಮಾಡಿದೆ.

ಪ್ರಕರಣವೊಂದರ ವಿಚಾರಣೆಗೆಂದು ಮಂಗಳವಾರ ಒಂಟಾರಿಯೋ ಪ್ರಾಂತದ ಹಸ್ರ್ಟ್ ನಗರಕ್ಕೆ ತೆರಳಿದ್ದ ಬಾಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು ಪೊಲೀಸರು ಸಾರ್ವಜನಿಕರಿಂದ ಮಾಹಿತಿಗಾಗಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News