×
Ad

ಫೆಲೆಸ್ತೀನಿಯನ್ ನಾಯಕ ಮರ್ವಾನ್ ಬಾರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ

Update: 2025-10-11 22:22 IST

Image: AP

ಟೆಲ್ ಅವೀವ್, ಅ.11: ಒತ್ತೆಯಾಳು- ಕೈದಿಗಳ ವಿನಿಮಯ ಪ್ರಕ್ರಿಯೆಯಡಿ ಬಿಡುಗಡೆಗೊಳಿಸಲಾಗುವ ಫೆಲೆಸ್ತೀನಿಯನ್ ಕೈದಿಗಳಲ್ಲಿ ಫೆಲೆಸ್ತೀನ್ ನ ಜನಪ್ರಿಯ ನಾಯಕ ಮರ್ವಾನ್ ಬಾರ್ಘೌಟಿ ಸೇರಿಲ್ಲ ಎಂದು ಇಸ್ರೇಲ್ ಶನಿವಾರ ಸ್ಪಷ್ಟಪಡಿಸಿದೆ.

ಜೊತೆಗೆ ಇತರ ಕೆಲವು ಉನ್ನತ ನಾಯಕರನ್ನೂ ಬಿಡುಗಡೆಗೊಳಿಸುವ ಪ್ರಸ್ತಾಪವನ್ನು ಇಸ್ರೇಲ್ ತಿರಸ್ಕರಿಸಿದೆ.

ಬಾರ್ಘೌಟಿ ಹಾಗೂ ಇತರ ಕೆಲವು ಉನ್ನತ ನಾಯಕರ ಬಿಡುಗಡೆಗೆ ಹಮಾಸ್ ಒತ್ತಾಯಿಸುತ್ತಿದ್ದು ಈ ಬಗ್ಗೆ ಮಧ್ಯಸ್ಥಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹಮಾಸ್ ಮೂಲಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News