ಸೆ.14ರಂದು ಗಲ್ಫ್ ಕರಾವಳಿ ದೇಶಗಳ ವಿದೇಶಾಂಗ ಸಚಿವರ ಸಭೆ
ಇಸ್ಮಾಯೀಲ್ ಬಗಾಯೀ | Photo Credit : PTI
ಟೆಹರಾನ್: ಹಾರ್ಮುಝ್ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗಗಳನ್ನು ನಿಗದಿಪಡಿಸುವ ಬಗ್ಗೆ ಇರಾನ್ ಮತ್ತು ಒಮಾನ್ ನಡುವಿನ ಮಾತುಕತೆ ಸೇರಿದಂತೆ ಪ್ರಾದೇಶಿಕ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಗಲ್ಫ್ ಕರಾವಳಿ ದೇಶಗಳ ವಿದೇಶಾಂಗ ಸಚಿವರು ಸೋಮವಾರ ಒಮಾನ್‍ನಲ್ಲಿ ಸಭೆ ಸೇರಲಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಘಾಯೀ ಹೇಳಿದ್ದಾರೆ.
ಈ ಸಭೆಯಲ್ಲಿ ಇರಾನ್, ಇರಾಕ್ ಮತ್ತು ಇತರ ಗಲ್ಫ್ ಕರಾವಳಿ ದೇಶಗಳು ಭಾಗವಹಿಸಲಿವೆ.
ಈ ಸಭೆಯು ಪ್ರಾದೇಶಿಕ ದೇಶಗಳ ನಡುವೆ ಪರಸ್ಪರ ತಿಳುವಳಿಕೆಯನ್ನು ಸುಧಾರಿಸಲು ಮತ್ತು ಜಂಟಿ ಪ್ರಾದೇಶಿಕ ಭದ್ರತೆಗೆ ಕೊಡುಗೆ ನೀಡಲು ಸೂಕ್ತ ವಾತಾವರಣವನ್ನು ಸೃಷ್ಟಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.