×
Ad

ಮತ್ತೆ ಉಲ್ಬಣಗೊಂಡ ಮಧ್ಯಪ್ರಾಚ್ಯ ಸಂಘರ್ಷ | ಈಶಾನ್ಯ ಇರಾನ್‌ನ ರೈಲ್ವೆ ಸೇತುವೆ ಮೇಲೆ ಅಮೆರಿಕದಿಂದ ವಾಯುದಾಳಿ

Update: 2026-07-09 07:29 IST

Photo: x.com/HormuzLetter

ಟೆಹ್ರಾನ್: ಈಶಾನ್ಯ ಇರಾನ್‌ನ ಗೋಲೆಸ್ತಾನ್ ಪ್ರಾಂತ್ಯದ ಅಕ್ಕಾಲಾ ನಗರದ ಹೊರವಲಯದಲ್ಲಿರುವ ಅಕ್ ಟೆಕೆಹ್ ಖಾನ್ ರೈಲ್ವೆ ಸೇತುವೆ ಮೇಲೆ ಅಮೆರಿಕ ಪಡೆಗಳು ವಾಯುದಾಳಿ ನಡೆಸಿವೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಸಂಸ್ಥೆ IRIB ವರದಿ ಮಾಡಿದೆ.

IRIB ವರದಿಯ ಪ್ರಕಾರ, ಸ್ಥಳೀಯ ಕಾಲಮಾನ ಬುಧವಾರ ರಾತ್ರಿ ಸುಮಾರು 1.30 ಗಂಟೆಗೆ (ಭಾರತೀಯ ಕಾಲಮಾನ ಬೆಳಗಿನ ಜಾವ 3:30) ಸೇತುವೆಯನ್ನು ಗುರಿಯಾಗಿಸಿ ಏಳು ಸ್ಫೋಟಕಗಳನ್ನು ಎಸೆಯಲಾಗಿದೆ. ಇರಾನ್ ಈ ಸ್ಫೋಟಕಗಳನ್ನು "ಶತ್ರು ದಾಳಿ" ಎಂದು ಬಣ್ಣಿಸಿದೆ.

ಏಳು ಸ್ಫೋಟಕಗಳಲ್ಲಿ ಎರಡು ರೈಲ್ವೆ ಹಳಿಯ ಮೇಲೆಯೇ ಸ್ಫೋಟಗೊಂಡಿದ್ದು, ಇದರಿಂದ ಹಳಿಗೆ ಹಾನಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News