×
Ad

ಈಜಿಪ್ಟ್ ನೊಂದಿಗೆ 35 ಶತಕೋಟಿ ಡಾಲರ್ ಅನಿಲ ಒಪ್ಪಂದಕ್ಕೆ ನೆತನ್ಯಾಹು ಅನುಮೋದನೆ

Update: 2025-12-18 21:51 IST

ಬೆಂಜಮಿನ್ ನೆತನ್ಯಾಹು | Photo Credit: PTI  

ಜೆರುಸಲೇಂ, ಡಿ.18: ಈಜಿಪ್ಟ್ ಗೆ ಅನಿಲ ರಫ್ತು ಮಾಡುವುದಕ್ಕೆ ಸಂಬಂಧಿಸಿ ಸುಮಾರು 35 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ.

ಇಸ್ರೇಲ್‍ ನ ಇತಿಹಾಸದಲ್ಲೇ ಅತೀ ದೊಡ್ಡ, 34.7 ಶತಕೋಟಿ ಡಾಲರ್ ಮೌಲ್ಯದ ಗ್ಯಾಸ್ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ . ಇದರಲ್ಲಿ 18 ಶತಕೋಟಿ ಡಾಲರ್‍ಗಳು ರಾಜ್ಯದ ಬೊಕ್ಕಸಕ್ಕೆ ಹೋಗುತ್ತದೆ. ಅಮೆರಿಕದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅದು ಈಜಿಪ್ಟ್‍ಗೆ ಗ್ಯಾಸ್ ಸರಬರಾಜು ಮಾಡುತ್ತದೆ ಎಂದು ನೆತನ್ಯಾಹು ದೂರದರ್ಶನದ ಮೂಲಕ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News