×
Ad

ಟ್ರಂಪ್ ಮಾರಕ ಪ್ರಮಾದ ಎಸಗುವುದಿಲ್ಲ ಎಂಬ ವಿಶ್ವಾಸವಿದೆ: ರಶ್ಯ ಎಚ್ಚರಿಕೆ

Update: 2025-12-18 21:07 IST

Photo Credit : AP \ PTI 

ಮಾಸ್ಕೋ, ಡಿ.18: ವೆನೆಝುವೆಲಾ ವಿಷಯದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಆಡಳಿತ ಮಾರಣಾಂತಿಕ ಪ್ರಮಾದ ಎಸಗುವುದಿಲ್ಲ ಎಂಬ ವಿಶ್ವಾಸವಿದೆ. ಅಂತರಾಷ್ಟ್ರೀಯ ಸರಕು ಸಾಗಣೆ ಪ್ರಕ್ರಿಯೆಗೆ ಬೆದರಿಕೆಯೊಡ್ಡಿರುವ ಅಮೆರಿಕಾದ ನಿರ್ಧಾರಗಳ ಬಗ್ಗೆ ಕಳವಳಗೊಂಡಿರುವುದಾಗಿ ರಶ್ಯದ ವಿದೇಶಾಂಗ ಇಲಾಖೆ ಗುರುವಾರ ಹೇಳಿದೆ.

`ನಮ್ಮ ಮಿತ್ರರಾಷ್ಟ್ರ ವೆನೆಝುವೆಲಾದ ಸುತ್ತಲಿನ ಉದ್ವಿಗ್ನತೆಗಳ ನಿರಂತರ ಮತ್ತು ಉದ್ದೇಶಪೂರ್ವಕ ಉಲ್ಬಣವನ್ನು ನಾವು ಗಮನಿಸಿದ್ದೇವೆ. ಅಂತರಾಷ್ಟ್ರೀಯ ಶಿಪ್ಪಿಂಗ್ ಪ್ರಕ್ರಿಯೆಗೆ ಬೆದರಿಕೆ ಒಡ್ಡಿರುವ ನಿರ್ಧಾರಗಳ ಏಕಪಕ್ಷೀಯ ಸ್ವರೂಪ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿಕೆ ತಿಳಿಸಿದೆ.

ತರ್ಕಬದ್ಧ ಮತ್ತು ಪ್ರಾಯೋಗಿಕ ವಿಧಾನಗಳಿಂದ ನಿರೂಪಿಸಲ್ಪಟ್ಟಿರುವ ಟ್ರಂಪ್ ಆಡಳಿತವು ಮಾರಕ ಪ್ರಮಾದ ಎಸಗುವುದಿಲ್ಲ ಎಂಬ ವಿಶ್ವಾಸವಿದೆ. ಅಮೆರಿಕಾ ಮತ್ತು ವೆನೆಝುವೆಲಾ ಮಾತುಕತೆಯ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ನಮ್ಮ ನಿಲುವಾಗಿದೆ. ಇಡೀ ಪಶ್ಚಿಮ ಭೂಗೋಳಾರ್ಧಕ್ಕೆ ಅನಿರೀಕ್ಷಿತ ಪರಿಣಾಮಗಳನ್ನು ಉಂಟು ಮಾಡುವ ಪರಿಸ್ಥಿತಿಗೆ ಅಮೆರಿಕಾ ಕಾರಣವಾಗುವುದಿಲ್ಲ ಎಂಬ ವಿಶ್ವಾಸವಿದೆ. ಮಡುರೊ ಸರಕಾರದ ಕ್ರಮಗಳನ್ನು ರಶ್ಯ ಬೆಂಬಲಿಸುತ್ತದೆ. ಈ ವಲಯದ ಎಲ್ಲಾ ದೇಶಗಳು ಸಂಯಮ ವಹಿಸಬೇಕು ಎಂದು ಆಗ್ರಹಿಸುವುದಾಗಿ ರಶ್ಯ ಅಧ್ಯಕ್ಷರ ಕಚೇರಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News