Photo Credit : AP 

ಟೆಲ್ ಅವೀವ್ : ಗಾಝಾದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಗುರಿ ಗುರುತಿಸುವ ವ್ಯವಸ್ಥೆಗಳನ್ನು ಬಳಸಿ ಇಸ್ರೇಲ್ ಸೇನೆಯು ನಾಗರಿಕರನ್ನು ಹತ್ಯೆ ಮಾಡಿದೆ ಎಂದು ಹೇಳಿರುವ ನಾಝಾ ಸಾಕ್ಷ್ಯಚಿತ್ರದಲ್ಲಿ ಹೇಳಿರುವ ಅನಾಮಧೇಯ ಮೂಲಗಳ ಕುರಿತು ತನಿಖೆ ನಡೆಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಗ್ರಹಿಸಿದ್ದಾರೆ.

‘ನಾಝಾ’ (NAZA) ಸಾಕ್ಷ್ಯಚಿತ್ರ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿತ್ತು. ಇದರಲ್ಲಿ ಗಾಝಾ ಪ್ರದೇಶದಲ್ಲಿ ನಾಗರಿಕರನ್ನು ಹತ್ಯೆ ಮಾಡಲು ಸೇನೆಯು ಈ ವ್ಯವಸ್ಥೆಗಳನ್ನು ಬಳಸುತ್ತಿದೆ ಎಂದು ಇಸ್ರೇಲ್ ಸೇನೆಯ 24 ಅನಾಮಧೇಯ ಆಂತರಿಕ ಮಾಹಿತಿದಾರರ ಹೇಳಿಕೆಗಳನ್ನು ದಾಖಲಿಸಲಾಗಿತ್ತು.

‘ನಾಝಾ’ ಚಿತ್ರದಲ್ಲಿ ಭಾಗವಹಿಸಿರುವವರ ವಿರುದ್ಧ ಸಮಗ್ರ ತನಿಖೆ ನಡೆಸಿ, ಭದ್ರತಾ ಮಾಹಿತಿಯ ಗಂಭೀರ ಉಲ್ಲಂಘನೆ, ಕ್ರಿಮಿನಲ್ ಮಾನಹಾನಿ ಹಾಗೂ ಇಸ್ರೇಲ್‌ನ ರಾಜತಾಂತ್ರಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಹಾನಿ ಮಾಡಿದ ಆರೋಪಗಳಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸೇನಾ ಮುಖ್ಯಸ್ಥರು, ಶಿನ್ ಬೆಟ್ ಮುಖ್ಯಸ್ಥರು ಮತ್ತು ಅಟಾರ್ನಿ ಜನರಲ್‌ಗೆ ನಾನು ಆಗ್ರಹಿಸುತ್ತೇನೆ” ಎಂದು ನೆತನ್ಯಾಹು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸಾಕ್ಷ್ಯಚಿತ್ರವು ಇಸ್ರೇಲ್ ದೇಶ ಮತ್ತು ಇಸ್ರೇಲ್ ಸೇನೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನಹಾನಿ ಮಾಡುವ ಸುಳ್ಳು, ತಪ್ಪುದಾರಿಗೆಳೆಯುವ ಹಾಗೂ ಪಕ್ಷಪಾತದ ನಿರೂಪಣೆಯನ್ನು ಹೊಂದಿದೆ. ಇದು ಇಸ್ರೇಲ್‌ನ ವರ್ಚಸ್ಸಿಗೆ ಹಾನಿಯನ್ನುಂಟುಮಾಡುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor