Photo Credit : AP 

ಕೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಶ್ಯ ಮತ್ತು ಉಕ್ರೇನ್ ನಡುವೆ ತಕ್ಷಣವೇ ಜಾರಿಗೆ ಬರುವಂತೆ `ಇಂಧನ ಕದನವಿರಾಮ' ಘೋಷಿಸಿದ ಕೆಲವೇ ಗಂಟೆಗಳಲ್ಲಿ ರಶ್ಯವು ಖಾರ್ಕಿವ್‍ನ ಥರ್ಮಲ್ ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ.

ಟ್ರಂಪ್ ಏಕಪಕ್ಷೀಯವಾಗಿ ಘೋಷಿಸಿದ ಇಂಧನ ಕದನ ವಿರಾಮಕ್ಕೆ ರಶ್ಯ ಒಪ್ಪಿಕೊಳ್ಳದಿದ್ದರೆ, ಉಕ್ರೇನ್ ಸಹ ತಕ್ಕ ತಿರುಗೇಟು ನೀಡಲಿದೆ. ಅಮೆರಿಕನ್ನರು ಮತ್ತು ರಶ್ಯನ್ನರ ನಡುವಿನ ಮಾತುಕತೆಯ ವಿವರಗಳಿಗಾಗಿ ಹಾಗೂ ಅಮೆರಿಕನ್ನರು ಯಾವ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂಬುದನ್ನು ನೋಡಲು ನಾವು ಕಾಯುತ್ತಿದ್ದೇವೆ' ಎಂದು ಝೆಲೆನ್‍ಸ್ಕಿ ಸೋಮವಾರ ತಿಳಿಸಿದ್ದಾರೆ.

`ರಶ್ಯದ ತೈಲ ಸಂಸ್ಕರಣಾಗಾರಗಳು ಮತ್ತು ತೈಲ ರಫ್ತಿನ ಮೇಲಿನ ನಮ್ಮ ಸುದೀರ್ಘ ವ್ಯಾಪ್ತಿಯ ದಾಳಿಯನ್ನು ನಾವು ನಿಲ್ಲಿಸಬೇಕೆಂದು ರಶ್ಯ ಬಯಸಿದರೆ, ರಶ್ಯ ಮೊದಲು ನಮ್ಮ ಇಂಧನ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಮತ್ತು ನಮ್ಮ ಜನರ ಹತ್ಯೆಯನ್ನು ನಿಲ್ಲಿಸಬೇಕು. ಇಂಧನ ಕದನ ವಿರಾಮ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹಾಗೂ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇತರ ಕ್ರಮಗಳ ಅಗತ್ಯ ನಿಜವಾಗಿಯೂ ಇಲ್ಲಿದೆ, ಕೇವಲ ಟ್ರೂತ್ ಸೋಶಿಯಲ್‍ನಲ್ಲಿ ಘೋಷಣೆಯಷ್ಟೇ (ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ವೇದಿಕೆ) ಅಲ್ಲ' ಎಂದು ಜೆಲೆನ್ಸ್ಕಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor