×
Ad

ಹಮಾಸ್ ಸೋಲದೆ ಗಾಝಾದಲ್ಲಿ ಇಸ್ರೇಲ್ ಕಾರ್ಯಾಚರಣೆ ನಿಲ್ಲುವುದಿಲ್ಲ: ನೆತನ್ಯಾಹು

Update: 2025-05-14 21:48 IST

ಬೆಂಜಮಿನ್ ನೆತನ್ಯಾಹು | PC : NDTV 

ಟೆಲ್‍ಅವೀವ್: ಇನ್ನಷ್ಟು ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಂದ ಏರ್ಪಟ್ಟರೂ ಗಾಝಾದಲ್ಲಿ ಯುದ್ಧವನ್ನು ನಿಲಿಸುವ ಮಾತೇ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇಸ್ರೇಲಿ ಪಡೆಗಳು ಹೆಚ್ಚುವರಿ ಬಲ ಪ್ರಯೋಗಿಸಿ ಗಾಝಾವನ್ನು ಪ್ರವೇಶಿಸುವ ಮತ್ತು ಗಾಝಾ ಕಾರ್ಯಾಚರಣೆಯ ಉದ್ದೇಶವನ್ನು ಪೂರ್ಣಗೊಳಿಸುವ ಗುರಿಗೆ ಅತೀ ಸನಿಹದಲ್ಲಿವೆ. ಅಂದರೆ ಹಮಾಸ್ ಅನ್ನು ನಾಶಗೊಳಿಸುವುದು. ಯಾವುದೇ ಒಪ್ಪಂದ ಏರ್ಪಟ್ಟರೂ ಅದು ತಾತ್ಕಾಲಿಕವಾಗಲಿದೆ. ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಾಗಿ ಹಮಾಸ್ ಹೇಳಿದರೆ ನಾವು ಒತ್ತೆಯಾಳುಗಳನ್ನು ಸ್ವೀಕರಿಸುತ್ತೇವೆ. ಆದರೆ ಯುದ್ಧ ಅಂತ್ಯಗೊಳಿಸುವ ಮಾತೇ ಇಲ್ಲ. ನಿರ್ದಿಷ್ಟ ಅವಧಿಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಬಹುದು. ಆದರೆ ನಾವು ಕೊನೆಯ ತನಕ ಹೋಗುತ್ತೇವೆ' ಎಂದು ನೆತನ್ಯಾಹು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News