×
Ad

ಹೊಸ ಪೋಪ್ ಆಯ್ಕೆ; ವ್ಯಾಟಿಕನ್ ನ ಚಿಮಣಿಯಿಂದ ಬಿಳಿ ಹೊಗೆ

Update: 2025-05-08 22:16 IST

Photo:x/@tribunephl

ವ್ಯಾಟಿಕನ್ ಸಿಟಿ: ವ್ಯಾಟಿಕನ್ ನ ಸಿಸ್ಟೀನ್ ಚಾಪೆಲ್ ನಲ್ಲಿ ಸೇರಿದ್ದ ಕಾರ್ಡಿನಲ್ ಗಳು ಹೊಸ ಪೋಪ್ ಅನ್ನು ಆಯ್ಕೆ ಮಾಡಿದ್ದು, ಅದನ್ನು ಸಾಂಕೇತಿಸುವ ಬಿಳಿ ಹೊಗೆ ಚಿಮಣಿ ಮೂಲಕ ಹೊರ ಬಂದಿದೆ. ಜಾಗತಿಕ ಕ್ರೈಸ್ತರ ಹೊಸ ಪರಮೋಚ್ಛ ಧರ್ಮಗುರುವಾಗಿ ಆಯ್ಕೆಯಾದವರು ಯಾರು ಎಂದು ಇನ್ನು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

ಪೋಪ್ ಫ್ರಾನ್ಸಿಸ್ ಅವರು ಎ.21ರಂದು ನಿಧನರಾದ ಬಳಿಕ ನೂತನ ಪೋಪ್ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಅದಕ್ಕಾಗಿ ಬುಧವಾರ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಎರಡನೇ ದಿನವೇ ಹೊಸ ಪೋಪ್ ಆಯ್ಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News