×
Ad

ಗಾಝಾ ನರಮೇಧವನ್ನು ಅಮೆರಿಕ ಬೆಂಬಲಿಸುತ್ತಿದೆ ಎಂದ ವಿದ್ಯಾರ್ಥಿಯ ಡಿಪ್ಲೊಮಾ ಪದವಿ ತಡೆ ಹಿಡಿದ ನ್ಯೂಯಾರ್ಕ್ ವಿವಿ

Update: 2025-05-17 22:24 IST

 ನ್ಯೂಯಾರ್ಕ್ ವಿವಿ | PC : NDTV 

ನ್ಯೂಯಾರ್ಕ್: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಅಮೆರಿಕ ಬೆಂಬಲಿಸುತ್ತಿದೆ ಎಂದು ಪದವಿ ಪ್ರಧಾನ ಸಮಾರಂಭದಲ್ಲಿ ಭಾಷಣ ಮಾಡಿದ ವಿದ್ಯಾರ್ಥಿಯ ಡಿಪ್ಲೊಮಾ ಪದವಿಯನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯ ತಡೆ ಹಿಡಿದಿದೆ.

ಲೋಗನ್ ರೋಝೋಸ್ ಎಂಬ ವಿದ್ಯಾರ್ಥಿ ಗ್ಯಾಲಾಟಿನ್ ಶಾಲಾ ಪದವಿ ಪ್ರಧಾನ ಸಮಾರಂಭದಲ್ಲಿ ಜನಸಮೂಹವನ್ನುದ್ದೇಶಿಸಿ ಮಾತನಾಡುತ್ತಾ, ಪ್ರಸ್ತುತ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನ್ಯೂಯಾರ್ಕ್ ವಿವಿ ವಕ್ತಾರ ಜಾನ್ ಬೆಕ್‌ಮನ್‌, ರೋಝೋಸ್ ಅವರ ವೈಯಕ್ತಿಕ ಮತ್ತು ಏಕಪಕ್ಷೀಯ ರಾಜಕೀಯ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವ ನಿರ್ಧಾರವನ್ನು ವಿಶ್ವವಿದ್ಯಾನಿಲಯವು ಬಲವಾಗಿ ಖಂಡಿಸುತ್ತದೆ. ವಿದ್ಯಾರ್ಥಿ ತನ್ನ ಭಾಷಣದ ಬಗ್ಗೆ ಸುಳ್ಳು ಹೇಳಿದ್ದಾನೆ ಮತ್ತು ನಮ್ಮ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ವಿಶ್ವವಿದ್ಯಾನಿಲಯವು ಲೋಗನ್ ರೋಝೋಸ್ ವಿರುದ್ಧದ ಶಿಸ್ತು ಕ್ರಮದ ಭಾಗವಾಗಿ ಡಿಪ್ಲೊಮಾವನ್ನು ತಡೆಹಿಡಿಯುತ್ತದೆ ಎಂದು ಹೇಳಿದರು.

ಲೋಗನ್ ರೋಝೋಸ್ ವಿರುದ್ಧದ ನ್ಯೂಯಾರ್ಕ್ ವಿವಿ ಕ್ರಮವು ಅಮೆರಿಕದ ಕಾಲೇಜು ಕ್ಯಾಂಪಸ್‌ಗಳಲ್ಲಿ ಫೆಲೆಸ್ತೀನ್ ಪರ ಧ್ವನಿಯನ್ನು ಹತ್ತಿಕ್ಕಿದ ಇತ್ತೀಚಿನ ನಿದರ್ಶನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News