×
Ad

5 ಭಾರತೀಯರ ಸಹಿತ 7 ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿದ ಇರಾನ್

Update: 2024-05-09 22:40 IST

PC : NDTV

ಲಿಸ್ಬನ್ : ಎಪ್ರಿಲ್ 13ರಂದು ಹಾರ್ಮುಜ್ ಜಲಸಂಧಿಯ ಬಳಿ ಇರಾನ್ ವಶಕ್ಕೆ ಪಡೆದಿದ್ದ ಪೋರ್ಚುಗೀಸ್ ಧ್ವಜ ಹೊಂದಿದ್ದ ಹಡಗಿನಲ್ಲಿದ್ದ 25 ಸಿಬ್ಬಂದಿಗಳಲ್ಲಿ 7 ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿದ್ದು ಇವರಲ್ಲಿ ಐವರು ಭಾರತೀಯರು ಎಂದು ಪೋರ್ಚುಗಲ್‍ನ ವಿದೇಶಾಂಗ ಇಲಾಖೆ ಗುರುವಾರ ಹೇಳಿದೆ.

ಬಿಡುಗಡೆಗೊಂಡವರಲ್ಲಿ ಐವರು ಭಾರತೀಯರು, ಓರ್ವ ಫಿಲಿಪ್ಪೀನ್ಸ್ ಹಾಗೂ ಓರ್ವ ಎಸ್ಟೋನಿಯಾ ಪ್ರಜೆಗಳು ಸೇರಿದ್ದಾರೆ. ಪೋರ್ಚುಗೀಸ್ ಧ್ವಜ ಹೊಂದಿರುವ ಎಂಎಸ್‍ಸಿ ಏರೀಸ್ ಹಡಗನ್ನು ಎಪ್ರಿಲ್ 13ರಂದು ಇರಾನ್‍ನ ರೆವೊಲ್ಯುಷನರಿ ಗಾಡ್ರ್ಸ್ ವಶಕ್ಕೆ ಪಡೆದಿತ್ತು. ಕಂಟೈನರ್ ಹಡಗು ಇಸ್ರೇಲ್ ಜತೆ ಸಂಪರ್ಕ ಹೊಂದಿತ್ತು ಎಂದು ಇರಾನ್ ವಿದೇಶಾಂಗ ಇಲಾಖೆ ಹೇಳಿತ್ತು.

ಇರಾನ್‍ನ ಕ್ರಮವನ್ನು ಸ್ವಾಗತಿಸಿರುವ ಪೋರ್ಚುಗಲ್, ಉಳಿದ 17 ಸಿಬ್ಬಂದಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ. ಹಡಗಿನ ಎಲ್ಲಾ ಸಿಬ್ಬಂದಿಗಳನ್ನೂ ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಆದರೆ ಜಫ್ತಿ ಮಾಡಿರುವ ಹಡಗನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಕಳೆದ ವಾರ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News