×
Ad

ಟ್ರಂಪ್ ಗೆಲುವಿನಿಂದ ಯಾವುದೇ ಪರಿಣಾಮವಿಲ್ಲ : ಇರಾನ್

Update: 2024-11-06 22:30 IST

ಡೊನಾಲ್ಡ್ ಟ್ರಂಪ್ | PC : PTI 

ಟೆಹ್ರಾನ್ : ಅಮೆರಿಕದ ಚುನಾವಣೆಗಳು ಅಥವಾ ಅದರ ಫಲಿತಾಂಶದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ನೀತಿಗಳು ಸ್ಥಿರವಾಗಿದೆ ಮತ್ತು ವ್ಯಕ್ತಿಗಳ ಆಧಾರದಲ್ಲಿ ಬದಲಾಗುವುದಿಲ್ಲ. ನಾವು ಮೊದಲೇ ಅಗತ್ಯದ ಮುನ್ನೆಚ್ಚರಿಕೆಯ ವ್ಯವಸ್ಥೆ ಮಾಡಿದ್ದೇವೆ ಮತ್ತು ನಮ್ಮ ಜನರ ಜೀವನೋಪಾಯದಲ್ಲಿ ಬದಲಾವಣೆ ಆಗುವುದಿಲ್ಲ ಎಂದು ಇರಾನ್ ಸರಕಾರದ ವಕ್ತಾರರು ಹೇಳಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಗೊಂಡ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಈ ಮಧ್ಯೆ, ಇರಾನ್ ಬೆಂಬಲಿತ ಹಮಾಸ್ `ಟ್ರಂಪ್ ಆಡಳಿತದಡಿ ಅಮೆರಿಕವು ಇಸ್ರೇಲ್ ಅನ್ನು ಕಣ್ಣುಮುಚ್ಚಿ ಬೆಂಬಲಿಸುವುದಿಲ್ಲ ಎಂದು ನಿರೀಕ್ಷಿಸುತ್ತೇವೆ' ಎಂದು ಪ್ರತಿಕ್ರಿಯಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News