×
Ad

ಲೆಬನಾನ್: ಇಸ್ರೇಲ್ ಡ್ರೋನ್ ದಾಳಿಯಲ್ಲಿ ಒಬ್ಬ ಮೃತ್ಯು

Update: 2025-03-04 22:44 IST

ಸಾಂದರ್ಭಿಕ ಚಿತ್ರ - AI

ಬೈರೂತ್ : ದಕ್ಷಿಣ ಲೆಬನಾನ್‍ನಲ್ಲಿ ವಾಹನವೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಲೆಬನಾನ್ ಸರ್ಕಾರಿ ಸ್ವಾಮ್ಯದ `ದಿ ನ್ಯಾಷನಲ್ ನ್ಯೂಸ್ ಏಜೆನ್ಸಿ' ಮಂಗಳವಾರ ವರದಿ ಮಾಡಿದೆ.

ಟೈರ್ ಜಿಲ್ಲೆಯಲ್ಲಿ ವಾಹನವೊಂದನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿ ಹೇಳಿದ್ದು ದಾಳಿಯ ಬಳಿಕ ವಾಹನ ಬೆಂಕಿಯಿಂದ ಉರಿಯುತ್ತಿರುವ ವೀಡಿಯೊವನ್ನು ಪ್ರಸಾರ ಮಾಡಿದೆ. ಕಳೆದ ನವೆಂಬರ್ 27ರಂದು ಲೆಬನಾನ್‍ನಲ್ಲಿ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟ ಬಳಿಕವೂ ಲೆಬನಾನ್ ಪ್ರದೇಶದ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News