×
Ad

ನಮ್ಮ ಮುಂದಿನ ಪ್ರತಿಕ್ರಿಯೆ ಗರಿಷ್ಠ ಮಟ್ಟದ್ದಾಗಿರಲಿದೆ: ಇಸ್ರೇಲ್‌ಗೆ ಇರಾನ್‌ ಎಚ್ಚರಿಕೆ

Update: 2024-04-20 11:54 IST

PC: NDTV 

ಟೆಹರಾನ್: ಇರಾನ್‌ ಮೇಲೆ ನಡೆದ ದಾಳಿ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಆದರೆ ಈ ದಾಳಿಗೂ ಇಸ್ರೇಲ್‌ಗೂ ಇರುವ ನಂಟು ಸಾಬೀತಾಗಿಲ್ಲ ಎಂದು ಇರಾನ್‌ನ ವಿದೇಶ ಸಚಿವ ಹುಸೇನ್‌ ಅಮೀರಬ್ದೊಲ್ಲಾಹಿಯಾನ್‌ ಹೇಳಿದ್ದಾರೆ.

ಡ್ರೋನ್‌ಗಳು ಇರಾನ್‌ನೊಳಗೆ ಹಾರಾಟ ನಡೆಸಿ ಕೆಲವು ನೂರು ಮೀಟರ್‌ ಸಾಗಿದ ನಂತರ ಅವುಗಳನ್ನು ಹೊಡೆದುರುಳಿಸಲಾಯಿತು ಎಂದು ಅವರು ಹೇಳಿದ್ದಾರೆ.

“ಅವು ನಮ್ಮ ಮಕ್ಕಳು ಆಡುವ ಆಟಿಕೆಗಳಂತಿದ್ದವು, ಡ್ರೋನ್‌ಗಳಲ್ಲ,” ಎಂದು ಅವರು ಹೇಳಿದರು. ದಾಳಿ ಕುರಿತು ಮಾಧ್ಯಮ ವರದಿಗಳು ನಿಖರವಾಗಿಲ್ಲ ಎಂದು ಅವರು ಹೇಳಿದರು.

ಇಸ್ರೇಲ್‌ ಪ್ರತೀಕಾರದ ಕ್ರಮಕೈಗೊಂಡರೆ ಮತ್ತು ಇರಾನ್‌ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯಾಚರಿಸಿದರೆ ನಮ್ಮ ಮುಂದಿನ ಪ್ರತಿಕ್ರಿಯೆ ತಕ್ಷಣ ಮತ್ತು ಗರಿಷ್ಠ ಮಟ್ಟದ್ದಾಗಿರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಇರಾನ್‌ ಮಾಧ್ಯಮ ಮತ್ತು ಕೆಲ ಅಧಿಕಾರಿಗಳ ಪ್ರಕಾರ ಕೆಲವೊಂದು ಸಣ್ಣ ಸಂಖ್ಯೆಯ ಸ್ಫೋಟಗಳು ಸಂಭವಿಸಿದ್ದು ವಾಯು ಪಡೆಗಳು ಕೇಂದ್ರ ಇರಾನ್‌ನ ಇಸ್ಫಾಹನ್‌ ಎಂಬಲ್ಲಿ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದರಿಂದ ಸಂಭವಿಸಿವೆ. ಈ ದಾಳಿ “ನುಸುಳುಕೋರರಿಂದ” ನಡೆದಿದೆ, ಇಸ್ರೇಲ್‌ನಿಂದ ಅಲ್ಲ ಎಂಬ ಅರ್ಥದಲ್ಲಿ ಕೆಲ ಅಧಿಕಾರಿಗಳು ವ್ಯಾಖ್ಯಾನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News