×
Ad

ಪಾಕಿಸ್ತಾನ ಟ್ರೈನ್ ಹೈಜಾಕ್ ಅಂತ್ಯ ; 346 ಒತ್ತೆಯಾಳುಗಳ ರಕ್ಷಣೆ, 33 ಉಗ್ರರು, 21 ಪ್ರಯಾಣಿಕರ ಸಾವು

Update: 2025-03-13 23:18 IST

PC: x.com/kumar_rish16022

ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ಉಗ್ರರ ಹಿಡಿತದಲ್ಲಿದ್ದ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಎರಡು ದಿನಗಳ ಕಾರ್ಯಾಚರಣೆಯಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಪಾಕಿಸ್ತಾನದ ಸೇನೆ ಹೇಳಿದೆ.

ಮಂಗಳವಾರ 450ಕ್ಕೂ ಅಧಿಕ ಪ್ರಯಾಣಿಕರಿದ್ದ ರೈಲನ್ನು ಬಲೂಚ್ ಲಿಬರೇಷನ್ ಆರ್ಮಿ(ಬಿಎಲ್ಎ) ಉಗ್ರರು ಹೈಜಾಕ್ ಮಾಡಿದ್ದರು. ಬುಧವಾರ ಸಂಜೆ ಎಲ್ಲಾ 33 ಉಗ್ರರನ್ನೂ ಹತ್ಯೆ ಮಾಡಿದ ಸಶಸ್ತ್ರ ಪಡೆಗಳು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿವೆ ಎಂದು ಸೇನಾಪಡೆಯ ವಕ್ತಾರ ಲೆ|ಜ| ಅಹ್ಮದ್ ಷರೀಫ್ರನ್ನು ಉಲ್ಲೇಖಿಸಿ `ದುನಿಯಾ ನ್ಯೂಸ್ ಟಿವಿ' ವರದಿ ಮಾಡಿದೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ 27 ಯೋಧರು ಸೇರಿದಂತೆ ಕನಿಷ್ಠ 30 ಯೋಧರು, 33 ಉಗ್ರರು, 21 ಪ್ರಯಾಣಿಕರು ಸಾವನ್ನಪ್ಪಿದ್ದು 346 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News