×
Ad

ಪಾಕಿಸ್ತಾನದಿಂದ ಜಮ್ಮುವಿನ ಮೇಲೆ ಕ್ಷಿಪಣಿ, ಡ್ರೋನ್‌ ದಾಳಿ

Update: 2025-05-08 21:36 IST

PC : NDTV 

ಶ್ರೀನಗರ: ಭಾರತದ 15 ನಗರಗಳನ್ನು ಗುರಿಯಾಗಿಸಿ ದಾಳಿಗೆ ವಿಫಲ ಯತ್ನವನ್ನು ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಜಮ್ಮುವಿನ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ ಗಳ ಮೂಲಕ ದಾಳಿ ನಡೆಸುತ್ತಿದೆ ಎಂದು Times Of India ವರದಿ ಮಾಡಿದೆ. ಪಾಕಿಸ್ತಾನದ ಇಂತಹ ಕ್ಷಿಪಣಿ ದಾಳಿಗಳನ್ನು ಭಾರತ ತಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಸ್ಥಳೀಯರು ಸೆರೆ ಹಿಡಿದ ವೀಡಿಯೊಗಳಲ್ಲಿ ಅಲ್ಲಿನ ಆಕಾಶದಾದ್ಯಂತ ಬೆಳಕಿನ ಜ್ವಾಲೆಗಳು ಕಂಡು ಬಂದಿವೆ. "ಜಮ್ಮುವಿನಲ್ಲಿ ಸಂಪೂರ್ಣ ಬ್ಲ್ಯಾಕ್ ಔಟ್ ಜಾರಿ ಮಾಡಲಾಗಿದ್ದು, ಬಾಂಬಿಂಗ್ , ಶೆಲ್ಲಿಂಗ್ ಹಾಗು ಕ್ಷಿಪಣಿ ದಾಳಿಯಂತಹ ಬಹಳ ದೊಡ್ಡ ಶಬ್ದಗಳು ಕೇಳಿ ಬಂದಿವೆ. ಮಾತಾ ವೈಶ್ನೋದೇವಿ ನಮ್ಮೊಂದಿಗಿದ್ದಾಳೆ ಜೊತೆಗೆ ದೇಶದ ಧೀರ ಯೋಧರೂ ಇದ್ದಾರೆ " ಎಂದು ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ ಶೇಷ್ ಪಾಲ್ ವೈದ್ ಟ್ವೀಟ್ ಮಾಡಿದ್ದಾರೆ. ಕುಪ್ವಾರಾ ಪಟ್ಟಣ ಮತ್ತು ಪಠಾಣ್ ಕೋಟ್‌ ನಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಪಂಜಾಬ್‌ ನ ಪಟ್ಟಣ ಗುರುದಾಸ್ಪುರದಲ್ಲಿ ಬ್ಲ್ಯಾಕೌಟ್ ಘೋಷಿಸಲಾಗಿದೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದ ಅಖ್ನೂರ್‌ ನಲ್ಲಿ ಸೈರನ್‌ ಗಳು ಕೇಳಿಬರುತ್ತಿವೆ. ಜಮ್ಮುವಿನಲ್ಲಿ ಸಂಪೂರ್ಣ ವಿದ್ಯುತ್ ಕಡಿತವಾಗಿದ್ದು, ಆಕಾಶದಲ್ಲಿ ಕ್ಷಿಪಣಿಗಳ ಸದ್ದು ಮತ್ತು ಪಾಕಿಸ್ತಾನದ ಡ್ರೋನ್ ದಾಳಿಗಳು ಕಂಡುಬಂದಿವೆ ಎಂಬ ವರದಿಯಾಗಿದೆ. ದಾಳಿಯ ಬೆನ್ನಲ್ಲೇ ಬಾರಾಮುಲ್ಲಾದಲ್ಲೂ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲು ಆದೇಶಿಸಲಾಗಿದೆ. ಪಂಜಾಬ್ ನ ಅಮೃತ್ ಸರದಲ್ಲೂ ಸಂಪೂರ್ಣ ಬ್ಲ್ಯಾಕ್ ಔಟ್ ಜಾರಿ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News