×
Ad

Pakistanನಲ್ಲಿ ಮಾಧ್ಯಮ ಸ್ವಾತಂತ್ರ್ಯವಿಲ್ಲ: ಜೆ.ಡಿ. ವ್ಯಾನ್ಸ್

Update: 2026-06-20 23:33 IST

Photo Credit: ndtv

ವಾಶಿಂಗ್ಟನ್, ಜೂ.20: ಇರಾನ್‌ ಶಾಂತಿ ಒಪ್ಪಂದದ ವಿವರಗಳನ್ನು ಬಿಡುಗಡೆ ಮಾಡಲು ಅಮೆರಿಕ ಏಕೆ ತಡ ಮಾಡಿತು ಎಂಬ ಮಾಧ್ಯಮದವರ ಪ್ರಶ್ನೆಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವಿಳಂಬಕ್ಕೆ ಮಧ್ಯಸ್ಥಿಕೆ ವಹಿಸಿದ ದೇಶಗಳಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಕೊರತೆಯೇ ಕಾರಣ ಎಂದು ಉತ್ತರಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

‘ಪಾಕಿಸ್ತಾನ ಮತ್ತು ಖತರ್ ದೇಶಗಳ ವ್ಯವಸ್ಥೆಗಳಲ್ಲಿ ನಮ್ಮಲ್ಲಿರುವಂತೆ ವಾಕ್‌ ಸ್ವಾತಂತ್ರ್ಯ ನೀಡುವ ಸಂವಿಧಾನದ ತಿದ್ದುಪಡಿ ಮತ್ತು ಮಾಧ್ಯಮ ಸ್ವಾತಂತ್ರ್ಯವಿಲ್ಲ. ಪ್ರಮುಖ ಸಂಧಾನಕಾರನಾಗಿ ಕಾರ್ಯನಿರ್ವಹಿಸಿದ ಪಾಕಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕೊರತೆಯೇ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಸಂಪೂರ್ಣ ಪಠ್ಯವನ್ನು ಸಾರ್ವಜನಿಕಗೊಳಿಸಲು ತಡವಾಗಲು ಕಾರಣ ಇರಬಹುದು’ ಎಂದು ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.

ಒಪ್ಪಂದದ ಅಧಿಕೃತ ಪ್ರಕಟಣೆಯ ನಂತರವೂ, 14 ಅಂಶಗಳ ತಿಳುವಳಿಕಾ ಪತ್ರದ ಸಂಪೂರ್ಣ ಪಠ್ಯವನ್ನು ತಕ್ಷಣವೇ ಸಾರ್ವಜನಿಕಗೊಳಿಸದ ಕಾರಣ, ಒಪ್ಪಂದದ ಬಗ್ಗೆ ಅನಿಶ್ಚಿತತೆ ಮೂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News