×
Ad

Cuba ನಾಯಕತ್ವ ಬದಲಾಯಿಸುವ ಕಾರ್ಯಾಚರಣೆ ‘ಸಾಧ್ಯ’: ಟ್ರಂಪ್

Update: 2026-06-20 23:23 IST

ಡೊನಾಲ್ಡ್ ಟ್ರಂಪ್ | Photo Credit : PTI

ವಾಷಿಂಗ್ಟನ್, ಜೂ.20: ಕ್ಯೂಬಾದಲ್ಲಿ ನಡೆಯಬಹುದಾದ ಅಮೆರಿಕದ ಸಂಭಾವ್ಯ ಕಾರ್ಯಾಚರಣೆಯು, ಇದೇ ವರ್ಷದ ಆರಂಭದಲ್ಲಿ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಾಸ್ ಮಡುರೊ ಅವರ ಬಂಧನಕ್ಕೆ ಕಾರಣವಾದ ಮಿಲಿಟರಿ ಕಾರ್ಯಾಚರಣೆಯನ್ನು ಹೋಲಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.

ಕ್ಯೂಬಾ ಇನ್ನೂ ವಾಷಿಂಗ್ಟನ್‌ ನ ಕಾರ್ಯತಂತ್ರದ ಗುರಿಯಲ್ಲೇ ಮುಂದುವರಿದಿದೆ. ಕ್ಯೂಬಾದಲ್ಲಿ ಭವಿಷ್ಯದ ಕಾರ್ಯಾಚರಣೆಯು ‘ಸಾಧ್ಯ’ ಮತ್ತು ಅದು ವೆನೆಜುವೆಲಾ ಕಾರ್ಯಾಚರಣೆಯಂತೆಯೇ ನಡೆಯಬಹುದು ಎಂದು ಟ್ರಂಪ್ ‘ಆಕ್ಸಿಯೋಸ್’ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಕ್ಯೂಬಾದಲ್ಲಿ ಶಾಂತಿಯುತ ಅಧಿಕಾರ ಬದಲಾವಣೆಯನ್ನು ತಾವು ಬಯಸುವುದಾಗಿ ಒತ್ತಿಹೇಳಿದ ಟ್ರಂಪ್, ಕ್ಯೂಬಾದ ಕಮ್ಯುನಿಸ್ಟ್ ಸರ್ಕಾರ ಪತನಗೊಂಡರೆ ಕೈಗೊಳ್ಳಬೇಕಾದ ಮಿಲಿಟರಿ ತುರ್ತು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಟ್ರಂಪ್ ಆಡಳಿತವು ಕ್ಯೂಬಾ ಮೇಲಿನ ಒತ್ತಡವನ್ನು ತೀವ್ರಗೊಳಿಸುತ್ತಿರುವ ಬೆನ್ನಲ್ಲೇ ಈ ಹೇಳಿಕೆಗಳು ಹೊರಬಂದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News