Libya | ವಲಸಿಗರಿದ್ದ ದೋಣಿ ಮುಳುಗಡೆ; 15 ಮಂದಿ ಮೃತ್ಯು
Update: 2026-06-20 23:18 IST
ಟ್ರಿಪೋಲಿ, ಜೂ.20: ಯುರೋಪ್ ರಾಷ್ಟ್ರಗಳತ್ತ ತೆರಳುತ್ತಿದ್ದ ವಲಸಿಗರನ್ನು ಹೊತ್ತಿದ್ದ ದೋಣಿಯೊಂದು ಕಳೆದ ವಾರ ಲಿಬಿಯಾ ಕರಾವಳಿಯಲ್ಲಿ ಮುಳುಗಡೆಯಾಗಿದ್ದು, 15 ಮೃತದೇಹಗಳು ಪತ್ತೆಯಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಪೂರ್ವ ಲಿಬಿಯಾದಲ್ಲಿ ವಲಸಿಗರ ಚಲನವಲನಗಳನ್ನು ಪತ್ತೆಹಚ್ಚುವ ‘ಅಬ್ರೀನ್’ ಗುಂಪಿನ ಪ್ರಕಾರ, ಜೂನ್ 12ರಂದು ಉತ್ತರ ಆಫ್ರಿಕಾದ ಪೂರ್ವ ಭಾಗದ ಮೆಡಿಟರೇನಿಯನ್ ಸಮುದ್ರದಲ್ಲಿ ಸಂಭವಿಸಿದ ಈ ದೋಣಿ ದುರಂತದಲ್ಲಿ ಹತ್ತು ವಲಸಿಗರು ಬದುಕುಳಿದಿದ್ದಾರೆ. ದುರಂತದಲ್ಲಿ ಇದುವರೆಗೆ 11 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 40 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಈ ವರ್ಷದ ಜನವರಿ 1ರಿಂದ ಮೇ 16ರ ನಡುವೆ ಮಧ್ಯ ಮೆಡಿಟರೇನಿಯನ್ ಮಾರ್ಗದಲ್ಲಿ 800ಕ್ಕೂ ಹೆಚ್ಚು ವಲಸಿಗರು ಸಾವನ್ನಪ್ಪಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ ವರದಿ ಮಾಡಿದೆ.