×
Ad

Lebanonನಲ್ಲಿ ಮುಂದುವರಿದ ಇಸ್ರೇಲ್ ದಾಳಿ: 5 ಮಂದಿ ಮೃತ್ಯು

Update: 2026-06-20 23:21 IST

ಸಾಂದರ್ಭಿಕ ಚಿತ್ರ | Photo Credit : aljazeera.com

ಬೈರೂತ್, ಜೂ.20: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆಯಾದ ಮರುದಿನವೇ, ದಕ್ಷಿಣ ಲೆಬನಾನ್‌ನ ನಬಾತಿಯಾ ಜಿಲ್ಲೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ (NNA) ವರದಿ ಮಾಡಿದೆ.

ಶುಕ್ರವಾರ ಮಧ್ಯರಾತ್ರಿಯ ನಂತರ ಮತ್ತು ಶನಿವಾರ ಬೆಳಿಗ್ಗೆ ದಕ್ಷಿಣ ಲೆಬನಾನ್‌ ನ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ನಬಾತಿಯಾ ನಗರ ಮತ್ತು ಅದರ ಹೊರವಲಯಗಳ ಮೇಲೆ ಫಿರಂಗಿ ದಾಳಿಯನ್ನೂ ನಡೆಸಿದೆ. ಅರಬ್ ಸಲೀಂ ಪಟ್ಟಣದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಮೃತಪಟ್ಟರೆ, ದೀರ್ ಜಹ್ರಾನಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ದ್ವೀರ್ ಪಟ್ಟಣದಲ್ಲಿ ಮೋಟಾರ್ ಸೈಕಲ್ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ಇಸ್ರೇಲ್–ಹಿಜ್ಬುಲ್ಲಾ ನಡುವೆ ತಕ್ಷಣ ಕದನ ವಿರಾಮ ಜಾರಿಗೆ ಬಂದಿದೆ ಎಂದು ಶುಕ್ರವಾರ ಅಮೆರಿಕದ ಅಧಿಕಾರಿಗಳು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News