×
Ad

ಪಾಕಿಸ್ತಾನ : ಕೈದಿಗಳನ್ನು ಕರೆದೊಯ್ಯುತ್ತಿದ್ದ ಐವರು ಪೊಲೀಸರ ಅಪಹರಣ

Update: 2025-05-04 21:46 IST

ಸಾಂದರ್ಭಿಕ ಚಿತ್ರ

ಖ್ವೆಟಾ: ನೈಋತ್ಯ ಪಾಕಿಸ್ತಾನದಲ್ಲಿ ರವಿವಾರ ಕೈದಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನಿನ ಮೇಲೆ ದಾಳಿ ಮಾಡಿದ ಪ್ರತ್ಯೇಕತಾವಾದಿ ಬಂಡುಕೋರರ ಗುಂಪು ಐವರು ಪೊಲೀಸ್ ಸಿಬ್ಬಂದಿಗಳನ್ನು ಅಪಹರಿಸಿರುವುದಾಗಿ ವರದಿಯಾಗಿದೆ.

ಬಲೂಚಿಸ್ತಾನ್ ಪ್ರಾಂತದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಪೊಲೀಸ್ ವ್ಯಾನನ್ನು ಸುಮಾರು 40 ಬಂದೂಕುಧಾರಿಗಳ ತಂಡ ಅಡ್ಡಗಟ್ಟಿದ್ದು ವ್ಯಾನನ್ನು ಅಪಹರಿಸಿದೆ. ಬಳಿಕ ಕೈದಿಗಳನ್ನು ಬಿಡುಗಡೆಗೊಳಿಸಿದರೂ ಐವರು ಪೊಲೀಸ್ ಸಿಬ್ಬಂದಿಗಳನ್ನು ಅಪಹರಿಸಿದೆ. ಅಲ್ಲದೆ ಈ ಪ್ರದೇಶದಲ್ಲಿ ಒಂದು ಸರ್ಕಾರಿ ಕಟ್ಟಡ ಹಾಗೂ ಬ್ಯಾಂಕ್ಗೆ ಬೆಂಕಿ ಹಚ್ಚಿದ್ದಾರೆ. ಅಪಹರಣಕ್ಕೆ ಒಳಗಾದ ಪೊಲೀಸರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News