ಶ್ರೀಲಂಕಾ: ಪ್ರಪಾತಕ್ಕೆ ಉರುಳಿದ ಬಸ್ಸು; 21 ಮಂದಿ ಸಾವು
Update: 2025-05-11 23:36 IST
Photo : PTI
ಕೊಲಂಬೋ: ಶ್ರೀಲಂಕಾದಲ್ಲಿ ರವಿವಾರ ಸಂಭವಿಸಿದ ಬಸ್ಸು ಅಪಘಾತದಲ್ಲಿ 21 ಮಂದಿ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕತರಗಾಮಾದಿಂದ ವಾಯವ್ಯ ಪಟ್ಟಣವಾದ ಕುರುನೆಗಾಲಾಕ್ಕೆ ತೆರಳುತ್ತಿದ್ದ 75ಕ್ಕೂ ಹೆಚ್ಚು ಬೌದ್ಧ ಯಾತ್ರಿಕರಿದ್ದ ಬಸ್ಸು ಮಧ್ಯ ಶ್ರೀಲಂಕಾದ ಕೊಟ್ಮಲೆ ಪ್ರಾಂತದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ 100 ಮೀಟರ್ ಆಳದ ಪ್ರಪಾತಕ್ಕೆ ಉರುಳಿಬಿದ್ದಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.