×
Ad

ಶಾಂತಿ ಪ್ರಶಸ್ತಿ | ನೊಬೆಲ್ ಸಮಿತಿಯ ನಿರ್ಧಾರಕ್ಕೆ ಶ್ವೇತಭವನದಿಂದ ಆಕ್ರೋಶ

“ಶಾಂತಿಗಿಂತ ರಾಜಕೀಯಕ್ಕೇ ಆದ್ಯತೆ"

Update: 2025-10-10 18:47 IST

Photo | ndtv

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿರುವುದಕ್ಕೆ ಶ್ವೇತಭವನದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಪ್ರಯತ್ನಗಳನ್ನು ನಿರ್ಲಕ್ಷಿಸಿರುವುದನ್ನು ಟೀಕಿಸುತ್ತಾ, ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಅವರು ನೊಬೆಲ್ ಸಮಿತಿಯು “ಶಾಂತಿಗಿಂತ ರಾಜಕೀಯಕ್ಕೇ ಪ್ರಾಮುಖ್ಯತೆ ನೀಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಮತ್ತೊಮ್ಮೆ, ನೊಬೆಲ್ ಸಮಿತಿಯು ಶಾಂತಿಗಿಂತ ರಾಜಕೀಯಕ್ಕೇ ಹೆಚ್ಚಿನ ಸ್ಥಾನ ನೀಡುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ಈ ತೀರ್ಮಾನವು ಜಾಗತಿಕ ಶಾಂತಿಗೆ ನಿಜವಾದ ಬದ್ಧತೆಗಿಂತ ಪಕ್ಷಪಾತವನ್ನು ಪ್ರತಿಬಿಂಬಿಸುತ್ತದೆ,” ಎಂದು ಹೇಳಿದ್ದಾರೆ.

“ಅಧ್ಯಕ್ಷ ಟ್ರಂಪ್ ವಿಶ್ವದಾದ್ಯಂತ ಶಾಂತಿ ಒಪ್ಪಂದಗಳನ್ನು ಮಾಡುತ್ತಾ, ಯುದ್ಧಗಳನ್ನು ಅಂತ್ಯಗೊಳಿಸುತ್ತಾ ಅನೇಕ ಜೀವಗಳನ್ನು ಉಳಿಸುತ್ತಿದ್ದಾರೆ. ಅವರಲ್ಲಿ ಮಾನವೀಯ ಹೃದಯವಿದ್ದು, ದೃಢನಿಶ್ಚಯದಿಂದ ಪರ್ವತಗಳನ್ನೇ ಅಲುಗಾಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರಂತಹ ನಾಯಕರು ಅಪರೂಪ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News