ವ್ಲಾದಿಮಿರ್ ಪುಟಿನ್ |Photo Credit : PTI 

ಮಾಸ್ಕೊ: ರಶ್ಯ ಮತ್ತು ಉಕ್ರೇನ್ ನಡುವೆ ಶಾಂತಿ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಜೊತೆಗೆ, ಅಮೆರಿಕದೊಂದಿಗೆ ಬಾಂಧವ್ಯವನ್ನು ಮರುಸ್ಥಾಪಿಸಲು ರಶ್ಯ ಒಲವು ತೋರಿದೆ ಎಂದು ತಿಳಿಸಿದ್ದಾರೆ.

`ಪೂರ್ವ ಆರ್ಥಿಕ ವೇದಿಕೆ'ಯ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಪುಟಿನ್ `ಈ ಸಮಸ್ಯೆಯನ್ನು ಪರಿಹರಿಸಲು ಕೊಡುಗೆ ನೀಡಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿದ್ದೇವೆ. ನನ್ನ ಪ್ರಕಾರ, ಶಾಂತಿ ಒಪ್ಪಂದಕ್ಕೆ ಅವಕಾಶವಿದೆ' ಎಂದು ಹೇಳಿದರು.

ಅಮೆರಿಕ ಆಡಳಿತದೊಂದಿಗಿನ ನಮ್ಮ ಸಂಪರ್ಕದ ವಿಷಯಕ್ಕೆ ಬಂದರೆ, ಇಂದಿಗೂ ಆ ಸಂಪರ್ಕ ಮುಂದುವರಿದಿದೆ ಮತ್ತು ಈ ಸಂಪರ್ಕಗಳು ಹೀಗೆಯೇ ಮುಂದುವರಿಯುತ್ತವೆ ಎಂದು ನಾನು ಭಾವಿಸುತ್ತೇನೆ. ಅಮೆರಿಕದೊಂದಿಗೆ ಪೂರ್ಣ ಪ್ರಮಾಣದ ಬಾಂಧವ್ಯವನ್ನು ಮರುಸ್ಥಾಪಿಸಲು ನಾವು ಒಲವು ಹೊಂದಿದ್ದೇವೆ ಎಂದು ಅವರು ತಿಳಿಸಿದರು.

ಬಾಂಧವ್ಯದ ಮರುಸ್ಥಾಪನೆಯು ಅಮೆರಿಕದ ಮೇಲೆಯೂ ಅವಲಂಬಿತವಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಕಾರಾತ್ಮಕ ಮತ್ತು ರಚನಾತ್ಮಕ ಕಾರ್ಯಕ್ಕೆ ಸಿದ್ಧರಾಗಿದ್ದಾರೆ ಎಂದು ಪುಟಿನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor