ಸಾಂದರ್ಭಿಕ ಚಿತ್ರ | Photo Credit : X

ಇಸ್ತಾಂಬುಲ್, ಸೆ. 2: ಇಸ್ತಾಂಬುಲ್ ಕರಾವಳಿಯಾಚೆಗಿನ ಸಮುದ್ರದಲ್ಲಿ ಸಂಭವಿಸಿದ ಅವಘಡವೊಂದರಲ್ಲಿ 10 ಮಂದಿ ನಾವಿಕರಿದ್ದ ಟರ್ಕಿಯ ಸರಕುಸಾಗಣೆ ಹಡಗೊಂದು ಜಲಸಮಾಧಿಯಾಗಿದೆ. ‘ತುಗ್ಬರ್ಕ್ ಇಮಾಮೊಗ್ಲು’ ಎಂಬ ಹೆಸರಿನ ಈ ಕಾರ್ಗೊ ನೌಕೆಯು ಮಾರ್ಮಾರಾ ಸಮುದ್ರದಲ್ಲಿ ಮುಂಜಾನೆ 3 ಗಂಟೆಯ ವೇಳೆ ತುರ್ಕಿಯೆ ಧ್ವಜಧಾರಿ ತೈಲ ಟ್ಯಾಂಕರ್ ನೌಕೆ ‘ಅಲ್ಸು’ವಿಗೆ ಡಿಕ್ಕಿ ಹೊಡೆದಿದೆ.

ಸಮುದ್ರಪಾಲಾದ ಸರಕುಸಾಗಣೆ ನೌಕೆಯಲ್ಲಿದ್ದ ಎಲ್ಲ 10 ನಾವಿಕರೂ ನಾಪತ್ತೆಯಾಗಿದ್ದಾರೆ. ಅವರೆಲ್ಲರೂ ತುರ್ಕಿಯೆ ಪ್ರಜೆಗಳೆಂದು ಮೂಲಗಳು ತಿಳಿಸಿವೆ. ಎರಡು ಹೆಲಿಕಾಪ್ಟರ್ ಗಳು ಹಾಗೂ ರಕ್ಷಣಾ ನೌಕೆಗಳು ಪ್ರದೇಶದಲ್ಲಿ ನಾಪತ್ತೆಯಾಗಿರುವ ನಾವಿಕರಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.

ಉಕ್ಕನ್ನು ಸಾಗಿಸುತ್ತಿದ್ದ ಈ ಹಡಗು ತುರ್ಕಿಯೆ ನ ಸಿಲಿವ್ರಿ ಜಿಲ್ಲೆಯ ಕರಾವಳಿಯಿಂದ ಸುಮಾರು 20 ಮೈಲು ದೂರದಲ್ಲಿ ಟ್ಯಾಂಕರ್ ನೌಕೆ ‘ಅಲ್ಸು’ಗೆ ಡಿಕ್ಕಿ ಹೊಡೆದಿದೆಯೆಂದು ಸಾಗರಯಾನ ವ್ಯವಹಾರಗಳ ಮಹಾನಿರ್ದೇಶನಾಲಯವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor