Photo Credit : AP 


ಟೆಹರಾನ್, ಆ. 24: ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಸೇವಾ ಶುಲ್ಕ ಪಡೆಯುವ ಪ್ರಸ್ತಾವನೆಗೆ ಇರಾನ್ ಸಂಸತ್ ರವಿವಾರ ಅನುಮೋದನೆ ನೀಡಿದೆ ಎಂದು ಇರಾನ್ ನ ಸುದ್ದಿಸಂಸ್ಥೆ ‘ಮೆಹರ್’ ವರದಿ ಮಾಡಿದೆ.

ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ಪಡೆಯುವ ದೇಶಗಳ ಹಡಗುಗಳಿಂದ ಇರಾನ್ ನ ಕರೆನ್ಸಿ ರಿಯಾಲ್ ಗಳಲ್ಲಿ ಅಥವಾ ಇರಾನ್ ಬಯಸುವ ಯಾವುದೇ ಇತರ ಕರೆನ್ಸಿಯಲ್ಲಿ ಶುಲ್ಕವನ್ನು ಸಂಗ್ರಹಿಸಲಾಗುವುದು ಎಂದು ಇರಾನ್ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗದ ವಕ್ತಾರರು ತಿಳಿಸಿದರು.

►ಸಮುದ್ರಯಾನ ಮತ್ತು ಇತರ ಸೇವೆಗಳಿಗೆ ಶುಲ್ಕಗಳು

‘ಹಾರ್ಮುಝ್ ಜಲಸಂಧಿಯಲ್ಲಿ ಭದ್ರತೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸುವ ರಕ್ಷಣಾ ಕ್ರಿಯಾ ಯೋಜನೆ’ಯ 3ನೇ ವಿಧಕ್ಕೆ ಸಂಸತ್ತು ಅನುಮೋದನೆ ನೀಡಿದೆ ಎಂದು ವಕ್ತಾರ ಹಸನ್ ಕಷ್ಕಾವಿ ಸುದ್ದಿಗಾರರಿಗೆ ತಿಳಿಸಿದರು. ಈ ವಿಧದ ಪ್ರಕಾರ, ನಾವು ಒದಗಿಸುವ ಕಡಲ ಸೇವೆಗಳು, ಪರಿಸರ ಸೇವೆಗಳು, ವಿಶೇಷ ಸಂದರ್ಭಗಳಲ್ಲಿ ಇಂಧನ ತುಂಬಿಸುವಿಕೆ, ವಿಮೆ, ಸುರಕ್ಷತೆ ಮತ್ತು ಇತರ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ವಕ್ತಾರರು ತಿಳಿಸಿದರು. ಈ ನಿಯಮವು ಕರಾವಳಿ ದೇಶಗಳ ಹಕ್ಕುಗಳು, ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಎತ್ತಿಹಿಡಿಯುತ್ತದೆ ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor