ಶಹಬಾಝ್ ಶರೀಫ್ | Photo Credit :PTI  

ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಅವರ ಬೆಂಬಲಿಗರು , ದೇಶದ ವಾಯವ್ಯ ಭಾಗದಿಂದ ಇಸ್ಲಾಮಾಬಾದ್‌ನೆಡೆಗೆ ನಡೆಸುತ್ತಿರುವ ಪಾದಯಾತ್ರೆಯನ್ನು ಕೈಬಿಡುವಂತೆ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಕರೆ ನೀಡಿದ್ದಾರೆ ಹಾಗೂ ಸರಕಾರದ ಜೊತೆಗೆ ಮಾತುಕತೆಗೆ ಬರುವಂತೆ ಆಹ್ವಾನಿಸಿದ್ದಾರೆ.

‘ವಿವೇಕಯುತವಾಗಿ ವರ್ತಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ನಿಮ್ಮ ಜಾಥಾಗಳನ್ನು ಹಾಗೂ ಧರಣಿಗಳನ್ನು ಕೊನೆಗೊಳಿಸಿ. ಒಮ್ಮೆ ಅದ್ನು ನೀವು ಕೊನೆಗೊಳಿಸಿದಲ್ಲಿ, ಖಂಡಿತವಾಗಿಯೂ ನಾವು ನಿಮ್ಮೊಂದಿಗೆ ಕುಳಿತು ಮಾತುಕತೆ ನಡೆಸಲಿದ್ದೇವೆ’’ ಎಂದು ಶರೀಫ್ ಅವರು ಹೇಳಿದ್ದಾರೆ.

ಪ್ರತಿಭಟನೆಗಳು ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ ಹಾಗೂ ಸರಕಾರದ ಆರ್ಥಿಕ ಸುಧಾರಣೆಯ ಪ್ರಯತ್ನಗಳನ್ನು ದುರ್ಬಲಗೊಳಿಸಲಿದೆ. ಇದು ಸರಕಾರದ ವಿರುದ್ದ ದ್ವೇಷ ಸಾಧನೆಗೆ ಸಮಾನವಾಗಿದೆ. ಆದರೆ ಹಾಗಾಗಲು ನಾವು ಬಿಡುವುದಿಲ್ಲವೆಂದು ಪಾಕ್ ಪ್ರಧಾನಿ ಹೇಳಿದ್ದಾರೆ. ಕಾನೂನು ಆದರದ್ದೇ ಆದ ಕ್ರಮವನ್ನು ಕೈಗೊಳ್ಳಲಿದೆ. ಜನತೆಯ ಆಸ್ತಿ, ಪಾಸ್ತಿಗಳನ್ನು ರಕ್ಷಿಸುವುದು ಸರಕಾರದ ಕರ್ತವ್ಯವಾಗಿದೆ ಎಂದವರು ಹೇಳಿದ್ದಾರೆ.

ಬಂಧನದಲ್ಲಿರುವ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ, ತೆಹ್ರಿಕೆ ಇನ್ಸಾಫ್ ಪಕ್ಷದ ಸಾವಿರಾರು ಕಾರ್ಯಕರ್ತರು ರವಿವಾರ ಪಾದಯಾತ್ರೆಯನ್ನು ಆರಂಭಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor