ಕಪ್ಪು ಸಮುದ್ರದಲ್ಲಿ ನೌಕೆಯ ಮೇಲೆ ರಶ್ಯ ಡ್ರೋನ್ ದಾಳಿ: ಕ್ಯಾಪ್ಟನ್ ಮೃತ್ಯು
Photo Credit : NDTV
ಕೀವ್: ಸೋಮವಾರ ಕಪ್ಪು ಸಮುದ್ರದಲ್ಲಿ ನೌಕೆಯೊಂದರ ಮೇಲೆ ರಶ್ಯ ನಡೆಸಿದ ಡ್ರೋನ್ ದಾಳಿಯಲ್ಲಿ ಹಡಗಿನ ಕ್ಯಾಪ್ಟನ್ ಮೃತಪಟ್ಟಿದ್ದಾರೆ. ಈ ಹಡಗಿನಲ್ಲಿ ಭಾರತ ಹಾಗೂ ಅಝರ್‍ಬೈಜಾನ್ ದೇಶದ ಪ್ರಜೆಗಳೂ ಇದ್ದರು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ.
ಮೆಕ್ಕೆಜೋಳವನ್ನು ಹೊತ್ತೊಯ್ಯುತ್ತಿದ್ದ ತುರ್ಕಿಯೆ ಒಡೆತನದ ನೌಕೆಯ ಮೇಲೆ ತಟಸ್ಥ ಜಲಪ್ರದೇಶದಲ್ಲಿ ರಶ್ಯದ ಎರಡು ಡ್ರೋನ್‍ಗಳು ಭೀಕರ ದಾಳಿ ನಡೆಸಿವೆ. ಸದ್ಯದ ಮಾಹಿತಿಯಂತೆ ಹಡಗಿನ ಕ್ಯಾಪ್ಟನ್ ಮೃತಪಟ್ಟಿದ್ದಾರೆ. 11 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಅವರಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ಅವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.