×
Ad

ಸೌದಿ ಅರೇಬಿಯಾದ ನೂತನ ಗ್ರ್ಯಾಂಡ್ ಮುಫ್ತಿಯಾಗಿ ಶೇಖ್ ಸಾಲಿಹ್ ಅಲ್ ಫೌಝಾನ್ ನೇಮಕ

Update: 2025-10-23 16:29 IST

ಶೇಖ್ ಸಾಲಿಹ್ ಅಲ್ ಫೌಝಾನ್ (Photo credit: arabnews.com)

ರಿಯಾದ್: ಸೌದಿ ಅರೇಬಿಯಾ ರಾಜಮನೆತನವು ಶೇಖ್ ಸಾಲಿಹ್ ಬಿನ್ ಫೌಝಾನ್ ಬಿನ್ ಅಬ್ದುಲ್ಲಾ ಅಲ್-ಫೌಝಾನ್ ಅವರನ್ನು ದೇಶದ ನೂತನ ಗ್ರ್ಯಾಂಡ್ ಮುಫ್ತಿಯಾಗಿ ಹಾಗೂ ಹಿರಿಯ ವಿದ್ವಾಂಸರ ಮಂಡಳಿಯ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ನೇಮಿಸಿದೆ ಎಂದು arabnews.com ವರದಿ ಮಾಡಿದೆ.

ರಾಜಮನೆತನದ ಆದೇಶದಂತೆ, ಈ ನೇಮಕಾತಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ಶಿಫಾರಸಿನ ಆಧಾರದ ಮೇಲೆ ಜಾರಿಯಾಗಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ (SPA) ಬುಧವಾರ ವರದಿ ಮಾಡಿದೆ.

ಶೇಖ್ ಅಲ್-ಫೌಝಾನ್ ಅವರು ಧಾರ್ಮಿಕ ವ್ಯಾಖ್ಯಾನಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ಸ್ಕಾಲರ್‌ಲಿ ರಿಸರ್ಚ್ ಅಂಡ್ ಇಫ್ತಾ ಜನರಲ್ ಪ್ರೆಸಿಡೆನ್ಸಿಯ ಅಧ್ಯಕ್ಷರ ಹುದ್ದೆಯನ್ನೂ ವಹಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಸೆ. 23ರಂದು ನಿಧನರಾದ ಗ್ರ್ಯಾಂಡ್ ಮುಫ್ತಿ ಶೇಖ್ ಅಬ್ದುಲ್ ಅಝೀಝ್ ಅಲ್ ಶೇಖ್ ಅವರ ನಿಧನದ ಬಳಿಕ ಈ ನೇಮಕಾತಿ ನಡೆದಿದೆ. ಧಾರ್ಮಿಕ ವಿದ್ಯಾಭ್ಯಾಸ ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರದ ಕ್ಷೇತ್ರದಲ್ಲಿ ವಿಶಾಲ ಅನುಭವ ಹೊಂದಿರುವ ಶೇಖ್ ಅಲ್-ಫೌಝಾನ್ ಅವರನ್ನು ಸೌದಿ ಅರೇಬಿಯಾದ ಅತ್ಯಂತ ಪ್ರಭಾವಶಾಲಿ ಧಾರ್ಮಿಕ ವಿದ್ವಾಂಸರಲ್ಲಿ ಒಬ್ಬರಾಗಿ ಪರಿಗಣಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News