×
Ad

ದಕ್ಷಿಣ ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಇಬ್ಬರು ಮೃತ್ಯು

Update: 2024-09-02 22:01 IST

pc : aljazeera.com

ಬೈರೂತ್ : ದಕ್ಷಿಣ ಲೆಬನಾನ್‍ನಲ್ಲಿ ಕಾರೊಂದನ್ನು ಗುರಿಯಾಗಿಸಿ ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ದಕ್ಷಿಣ ಕರಾವಳಿ ನಗರ ನಖೌರಾದಲ್ಲಿ ಕಾರೊಂದರ ಮೇಲೆ ನಡೆದ ದಾಳಿಯಲ್ಲಿ ಲೆಬನಾನ್‍ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ನಿಯೋಗ(ಯುನಿಫಿಲ್)ದ ಗುತ್ತಿಗೆ ಕೆಲಸಗಾರ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‍ನ ಆರೋಗ್ಯ ಇಲಾಖೆ ಹೇಳಿದೆ.

ವೈಮಾನಿಕ ದಾಳಿಯಲ್ಲಿ ಶಾಂತಿಪಾಲನಾ ನಿಯೋಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ವಿದೇಶದಿಂದ ಬಂದಿದ್ದ ಪ್ರವಾಸಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ನಾಗರಿಕರ ಮೇಲೆ ದಾಳಿ ನಡೆಸುವುದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಯುನಿಫಿಲ್‍ನ ವಕ್ತಾರೆ ಕ್ಯಾಂಡಿಸ್ ಆಡ್ರಿಯೆಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News